Friday, 5 December 2014

ತ್ಯಾಗ ಜೀವಿಯ ನೆನಪಲ್ಲಿ....

ತ್ಯಾಗ ಜೀವಿಯ ನೆನಪಲ್ಲಿ....
\ಸ್ನೇಹಿತರಿಗೆ ನಾನು ನನ್ನ ಮುಖಪುಟದಿಂದ ಕಳೆದ ಕೆಲವು ದಿನಗಳಿಂದ ಕಾನಿಸದಿದ್ದುದಕ್ಕೆ ಕಾರಣವಿತ್ತು. ಬಡತನದಲ್ಲಿ ಬೆಂದು ಬಳಲಿ ತನ್ನ ಮೂವರು ಮಕ್ಕಳನ್ನು ಸ್ನಾತಕೋತ್ತರ ಪದವಿಧರನ್ನಾಗಿ ಮಾಡಿದ ನನ್ನ ಪೂಜ್ಯ ತಂದೆ ತ್ಯಾಗ ಜೀವಿಯು ದಿವಂಗತರಾಗಿ ಇಂದಿಗೆ 12 ದಿನಗಳು ಕಳೆದವು. ತನ್ನ ಮಕ್ಕಳ ಸಾಕಿ ಸಲುಹಿ ಬೆಳಸಲೋಸುಗ ವಿವಿಧ 11 ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ನೋವು ನಲಿವುಗಳನ್ನುಂಡು ಕಷ್ಟಕೂಟಲೆಗಳನ್ನೆದುರಿಸಿ ತನ್ನ 57ನೇ ವಯಸ್ಸಿನಲ್ಲಿ ದೇಹತ್ಯಾಗ ಮಾಡಿದರು. ಅವರ ಬದುಕು ಮತ್ತು ಸಹನೆ, ಮಕ್ಕಳನ್ನು ಸ್ನೇಹಿತರಂತೆ ಬೆಳೆಸಿದ ರೀತಿ ಮಾರ್ಗದರ್ಶಿತ್ವವು ನಮಗೆ ಪ್ರೇರಣೆಯಾಗಿದ್ದಲ್ಲದೆ ಸಮಾಜಕ್ಕೂ ಪ್ರೇರಣೆ ಎಂಬುದು ಸುಳ್ಳಲ್ಲ. ಒಬ್ಬ ತಂದೆ ತನ್ನ ಮಕ್ಕಳನ್ನು ಸಾಕಲು ಜೀವನದಲ್ಲಿ ಅವರು ಅನುಭವಿಸಿದ ಘಟನೆಗಳು ಇಂದಿಗೂ ನಮ್ಮ ಕಣ್ಣಮುಂದೆ ಸುಳಿಯುತ್ತಿದೆ...............ನೋವಿನ ನೆನಪು ಮತ್ತೆ ಮತ್ತೆ ಕಾಡುತ್ತಿದೆ.

No comments: