Monday 17 November 2014

ಹಕ್ಕಿ ಹಾರುತಿದೆ ನೋಡಿರೋ-----ನನ್ನ ಕವನ

ನನ್ನ ಕೆಲವು ಕವನಗಳಲ್ಲಿ ನನಗೆ ಹೆಚ್ಚಾಗಿ ಮೆಚ್ಚುಗೆಯಾದ ಕವನ ನಿಮಗೂ ಹಿಡಿಸಿದಲ್ಲಿ ಒಂದು ಸಣ್ಣ ಲೈಕ್ ಮಾಡಿ............
............ಹಕ್ಕಿ ಹಾರುತಿದೆ ನೋಡಿರೋ.............

--
ಹಕ್ಕಿ ಹಾರುತಿದೆ ನೋಡಿರೋ
ಭ್ರಷ್ಠಾಚಾರಿಗಳ, ಅತ್ಯಾಚಾರಿಗಳ
ಪುಂಡ, ಪೋಕರಿಗಳ ನೆತ್ತಿಮ್ಯಾಲೆ
ಹಕ್ಕಿ ಹಾರುತಿದೆ ನೋಡಿರೋ                                 (ಪಲ್ಲವಿ)
                   ವಿದೇಶಿ ಕಂಪನಿಗಳಿಗೆ ಭೂಮಿ ಕೊಟ್ಟಿ
                   ಉಳುವಾಯೋಗಿಗೆ ಉರುಳು ಕೊಟ್ಟಿ
                   ದನಕರುಗಳ ನೆತ್ತಿಮ್ಯಾಲೆ
                   ಹಕ್ಕಿ ಹಾರುತಿದೆ ನೋಡಿರೋ
ಕಪ್ಪುಹಣದಲ್ಲಿ ಮಂದಿರ ಕಟ್ಟಿ
ಮಂದಿರಕೊಬ್ಬ ಪೂಜಾರಿನ್ನಿಟ್ಟಿ
ಭಕ್ತಗಣದ ನೆತ್ತಿಮ್ಯಾಲೆ
ಹಕ್ಕಿ ಹಾರುತಿದೆ ನೋಡಿರೋ
                    ಜಾತಿಗೊಂದು ಮೂರ್ತಿ ಕೊಟ್ಟಿ
                    ಸ್ನೇಹ ಸಂಬಂಧಕ್ಕೆ ಕೊಳ್ಳಿ ಇಟ್ಟಿ
                    ಮಂದಿರ ಮಸಿದಿಗಳ ನೆತ್ತಿಮ್ಯಾಲೆ
                    ಹಕ್ಕಿ ಹಾರುತಿದೆ ನೋಡಿರೋ
ಗಲ್ಲಿ ಗಲ್ಲಿಗಳಲ್ಲಿ ದ್ವಜವ ನೆಟ್ಟಿ
ಕಾಯಿದೆ ರೂಪಿಸಿ ಕೈಗೆ ಕೊಟ್ಟಿ
ಕಾಟಾಚಾರಿಗಳ ನೆತ್ತಿಮ್ಯಾಲೆ
ಹಕ್ಕಿ ಹಾರುತಿದೆ ನೋಡಿರೋ
                      ಹೋರಾಟದಿ ಪಡೆದಿ ಪ್ರಚಾರ ಬಿಟ್ಟಿ
                      ಹಸಿದವರ ಬಾಳಿಗೆ ಬೆಂಕಿ ಇಟ್ಟಿ
                      ನಂಬಿದ ಜನರ ನೆತ್ತಿಮ್ಯಾಲೆ
                      ಹಕ್ಕಿ ಹಾರುತಿದೆ ನೋಡಿರೋ
ಕಳ್ಳರ ಕೈಗೆ ಪಡಿತರ ಕೊಟ್ಟಿ
ಬಡಬಗ್ಗರಿಗೆಂದು ಚೀಟಿ ಕೊಟ್ಟಿ
ಕಾಳಸಂತೆಕೋರರ ನೆತ್ತಿಮ್ಯಾಲೆ
ಹಕ್ಕಿ ಹಾರುತಿದೆ ನೋಡಿರೋ
                          ಅಕ್ರಮಗಳ ತನಿಖೆಗೆ ಆಯೋಗ ಕಟ್ಟಿ
                          ವರದಿ ಸೇರಿಸಿದಿ ಕಸದ ಬುಟ್ಟಿ
                          ದೂರಿನ ಅರ್ಜಿಗಳ ನೆತ್ತಿಮ್ಯಾಲೆ
                           ಹಕ್ಕಿ ಹಾರುತಿದೆ ನೋಡಿರೋ

ಹಕ್ಕಿ ಹಾರುತಿದೆ ನೋಡಿರೋ
ಭ್ರಷ್ಠಾಚಾರಿಗಳ, ಅತ್ಯಾಚಾರಿಗಳ
ಪುಂಡ, ಪೋಕರಿಗಳ ನೆತ್ತಿಮ್ಯಾಲೆ
ಹಕ್ಕಿ ಹಾರುತಿದೆ ನೋಡಿರೋ

----------- ಮೌನಯೋಗಿ.......
ಇದನ್ನು ಕಾವ್ಯನಾಮವಾಗಿಟ್ಟುಕೊಂಡಿದ್ದೇನೆ.......

Thursday 13 November 2014

ಬಾಂಧವ್ಯದ ಬೆಸುಗೆ

ಬಾಂಧವ್ಯದ ಬೆಸುಗೆ

ಭಾವನೆಗಳ ಬಾಂಧವ್ಯಕ್ಕೆ ದೀಪದ ಬೆಸುಗೆ
ಕತ್ತಲು ಕಳೆದು ಬಂದೆ ನೀ ಹೊಸ ಬಾಳಿಗೆ
ಯಾರೋ ಮನೆಯಂಗಳದಿ ಅರಳಿದ ಹೂ
ಕರುಣೆಯ ಹೊಂಬೆಳಕು
ಎಮ್ಮ ಮನೆಯಂಗಳದಿ ದೀಪವ ಹಚ್ಚಿ
ಪಸರಿಸಿದಿ ನೀ ನಗೆಯ ಬೆಳಕು
ದೀಪದಿಂದ ದೀಪವೋ ಬಾಂಧವ್ಯದ ಬೆಸುಗೆಯೋ
ಭಾವನೆಗಳ ಬಾಂಧವ್ಯಕ್ಕೆ ದೀಪದ ಬೆಸುಗೆ
ಕತ್ತಲು ಕಳೆದು ಬಂದೆ ನೀ ಹೊಸ ಬಾಳಿಗೆ

                              --------- ಮೌನಯೋಗಿ


Wednesday 12 November 2014

ಶಬ್ದಗಳ ಗೊಂದಲ, ಓದುಗ ವಿಲವಿಲ

ಪತ್ರಿಕಾರಂಗ ಈಗ ಕಳೆಕಳೆದುಕೊಳ್ಳುತ್ತಾ ಉದ್ಯಮವಾಗಿ ಪತ್ರಿಕೋಧ್ಯಮವಾದಂತೆಲ್ಲ ಅದರಲ್ಲಿ ಭಾಷೆಯ ಬಳಕೆ ಕೂಡ ಭಿನ್ನ ವಿಭಿನ್ನವಾಗುತ್ತಿದೆ. ಸಾಹಿತ್ಯೀಕ ಭಾಷೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಾ ಓದುಗನ ಅಭಿರುಚಿಗಿಂತ ತಮ್ಮ ತಮ್ಮ ಶೈಲಿಯಲ್ಲಿ ಭಾಷೆಯ ಪದ ಬಳಕೆ ಈಗ ಹೆಚ್ಚಾಗುತ್ತಿದೆ ಆದ್ದರಿಂದ ಈ ಭಾಷೆಯ ಶಬ್ದಗಳ ಗೊಂದಲದಿಂದ ಓದುಗ ವಿಲವಿಲ ಒದ್ದಾಡುತ್ತಿದ್ದಾನೆ ಎನ್ನುವದರಲ್ಲಿ ಎರಡು ಮಾತಿಲ್ಲ.
ಪ್ರತಿಯೊಂದು ಪತ್ರಿಕೆ ಇಂದು ತನ್ನದೇ ಆದ ಭಾಷೆ ಶೈಲಿಯ ಪದ ಬಳಕೆಯನ್ನ ಹೊಂದಿದೆ. ಗಮನಿಸಬೇಕಾದುದು ಇಲ್ಲಿ ಶೈಲಿ ಯಾರದಾದರೇನು ಪತ್ರಿಕೆಗಳಿಗೆ ಓದುಗ ಮುಖ್ಯವಲ್ಲವೇ ಆದರೆ ಇಲ್ಲಿ ಶೈಲಿಯ ಪದಗಳ ವಿಭಿನ್ನತೆಯಿಂದ ಆ ಶಬ್ದಗಳ ಗೊಂದಲ ಓದುಗನನ್ನು ಕಾಡುತ್ತಿರುವುದಂತು ಸತ್ಯ.

ನಮ್ಮ ಸಾಹಿತೀಕ ಪರಿಭಾಷೆಯಲ್ಲಿ ನಾವು ಒಂದೇ ಶಬ್ದಕ್ಕೆ ಹಲವು ಅರ್ಥಗಳನ್ನ ಬಳಸುವುದನ್ನು ನಾವು ಕಾಣುತ್ತೇವೆ. ಯಾಕೆಂದತೆ ಆ ಕೃತಿ ರಚಿಸಿದ ಸಾಹಿತಿ ಅವರು ಜೀವಿಸುತ್ತಿರುವಲ್ಲಿನ ಪರಿಸರದಲ್ಲಿ ಬಳಸುವ ಶಬ್ದಗಳ ಬಳಕೆಯಿಂದ ಸಾಹಿತ್ಯ ರಚಿಸುವುದು ಸೂಕ್ತವೆನ್ನುವುದು ನಮ್ಮ ಅನಿಸಿಕೆ. ಆದರೆ ಒಂದು ಪತ್ರಿಕೆ ಯಾವೊಂದು ಪರಿಸರ ಅಥವಾ ಪ್ರದೇಶಕ್ಕೆ ಸಿಮಿತವಾಗಿರಲ್ಲ ಅಖಂಡತೆಯನ್ನ ಪತ್ರಿಪಾಧಿಸುವ ಒಂದು ಸಂಚಾರ ಮಾಧ್ಯಮ ಇಲ್ಲಿ ಪತ್ರಿಕೆಗೆ ಒಂದು ಭಾಷೆ ಇರುತ್ತದೇಯೋ ಹೊರತು ಪ್ರದೇಶಕ್ಕೊಂದು ಭಾಷೆ ಇರಲ್ಲ. ಒಂದಂತು ಸತ್ಯ ಆ ಪತ್ರಿಕೆಗಳಲ್ಲಿ ಪ್ರಚುರಪಡಿಸುವ ಲೇಖನಗಳು ಆಯಾಯ ವಿಚಾರವಾದಿಗಳ ಅಥವಾ ಲೇಖಕರ ಸ್ಥಳೀಯ ಭಾಷೆಯಿಂದ ಕೂಡಿದ್ದರೂ ಅದು ಸ್ಥಳೀಯವಾಗಿ ಪ್ರಕಟಗೊಳ್ಳುವ ಅಥವಾ ಆ ಪತ್ರಿಕೆಗೆ ಮಾತ್ರ ಸಿಮಿತವಾಗಿರುತ್ತದೆ. ಇಲ್ಲಿ ನಾವು ಒಂದು ವಿಷಯವನ್ನು ಗಮನಿಸಬೇಕಾಗಿದೆ. ಭಾಷೆ ಒಂದೇ ಇದ್ದರೂ ಪದ ಬಳಕೆಯಲ್ಲಿ ಸಾಹಿತ್ಯ ಭಾಷೆಗೂ ಮತ್ತು ಪತ್ರಿಕಾ ಭಾಷೆಗೂ ನಾವು ವಿಂಗಡನೆಯನ್ನ ಕಾಣುತ್ತೇವೆ. ಅದಕ್ಕಾಗಿ ಪತ್ರಿಕೆ ಅಖಂಡತ್ವವನ್ನು ಉಳಿಸಿಕೊಳ್ಳುತ್ತಿಲ್ಲವೆನ್ನುವ ಕೊರಗು ಓದುಗನನ್ನು ಇಂದು ಕಾಡುತ್ತಿದೆ.
ಉದಾ: ಸರ್ಕಾರ, ಸರಕಾರ, ಡೆಂಘೆ, ಡೆಂಗ್ಯೂ, ಡೆಂಘಿ ಹೀಗೆ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ.
ಮತ್ತೊಂದು ವಿಶೇಷವೆಂದರೆ ಕೆಲವು ಪತ್ರಿಕೆಗಳಲ್ಲಿ ಮುಖ್ಯಗುರು ಎಂದು ಶಿಕ್ಷಕರನ್ನು ಸಂಭೋಧಿಸಲಾಗುತ್ತದೆ ಇದು ಎಷ್ಟರ ಮಟ್ಟಿಗೆ ಸರಿ ಗುರು ಎಂಬ ಶಬ್ದ ಅನಾದಿ ಕಾಲದಿಂದ ಬಂದದ್ದು. ಆಗ ಗುರುಕುಲ ಪದ್ದತಿ ಇರುವುದರಿಂದ ಶಿಕ್ಷಣ ನೀಡುವವರಿಗೆ ಗುರುಗಳು ಎಂದು ಕರೆಯಲಾಗುತ್ತಿತ್ತು, ಈಗ ಶಿಕ್ಷಣ ಪದ್ಧತಿ ಬೇರೆಯಾಗಿದೆ. ಅಷ್ಟೆಅಲ್ಲದೇ ಗುರುಗಳಲ್ಲಿ ಮುಖ್ಯಗುರು ಇರಲು ಸಾಧ್ಯವೇ? ಈಗ ಶಿಕ್ಷಕ ಎನ್ನುವ ಶಬ್ದ ಬಂದಿರುವುದರಿಂದ ಮುಖ್ಯ ಶಿಕ್ಷಕ ಎಂದು ಕರೆಯುವುದು ಸರಿಯಲ್ಲವೇ.
ಇನ್ನು ಕೆಲವು ಪತ್ರಿಕೆಗಳಲ್ಲಿ ಸಾವನ್ನಪ್ಪಿದ ಎಂಬ ಶಬ್ದ ಬಳಸಲಾಗುತ್ತದೆ ಅದು ಆತ್ಮಹತ್ಯೆಯ ಸುದ್ದಿಗಾದರೆ ಸರಿ. ಅಫಘಾತ, ಕೊಲೆಯಂತಹ ಸುದ್ದಿಗಳಲ್ಲಿ ಬಳಸಲಾಗುತ್ತದೆ ಇದು ಸರಿಯೇ.
ಈ ಸಾಹಿತ್ಯೀಕ ಪರಿಭಾಷೆಗೂ ಪತ್ರಿಕೋದ್ಯಮದ ಭಾಷೆಗೂ ಒಂದಕ್ಕೊಂದು ಸಂಬಂಧವನ್ನು ಕಲ್ಪಿಸುವಲ್ಲಿ ಕೆಲವು ಪತ್ರಿಕೆಗಳು ಅಳತೆಯನ್ನ ಮೀರುತ್ತಾ ಓದುಗನನ್ನು ಮರೆಯುತ್ತಿವೆ ಎನ್ನುವುದು ಕೂಡ ಕಳವಳಕಾರಿ ಸಂಗತಿಯಾಗಿದೆ.

Wednesday 5 November 2014

ಶಾಲು...............

ಶಾಲು...............
ಶಾಲು ಸನ್ಮಾನ ಬೇಡವೆನ್ನದರಿ
ಓ ಸನ್ಮಾನಿತರೇ
ಬದುಕು ಬೇಡವಾದಾಗ
ಅಥವಾ ಸಾಲ ಹೆಚ್ಚಾದಾಗ
ಆಧಾರಕ್ಕಿರಲಿ ಈ ಶಾಲು...................
-------------------------------------------------ಮೌನಯೋಗಿ.............