Monday 9 February 2015

ಸುಳ್ಳಿನ ಸರಮಾಲೆ ಮುತ್ತು ಪೋಣಿಸಿದಂತೆ..........

ಒಂದು ಸುಳ್ಳಿನ ಕಥೆ..........

ಸುಳ್ಳಿನ ಸರಮಾಲೆ ಮುತ್ತು ಪೋಣಿಸಿದಂತೆ..........

ಬಾಲ್ಯದ ಮಾಸದ ನೆನಪುಗಳು, ಕಂಡ ಕನಸುಗಳು ಇನ್ನು ಹಸಿಯಾಗಿವೆ ಏನೋ ಎನಿಸುತ್ತಿವೆ. ತೀರಾ ಇತ್ತಿಚಿಗೆ ನಡೆದಿದೆಯೇನೋ ಎಂಬಂತೆ. ಹಸಿ ಸುಳ್ಳಿಗೆ ಹದಿನಾರು ಸಾವಿರ ದಾರಿಯಂತೆ. ನಿಜವೆ ಇರಬಹುದು. ಸುಳ್ಳು ಹೇಳುವುದು ಎಂದರೆ ಸುಲಭವಲ್ಲ ಅದೊಂದು ಕಲೆ. ವಂಶಪಾರಂಪರ್ಯವಾಗಿಯಾಗಲಿ ಅಥವಾ ಜನ್ಮದತ್ತವಾಗಿಯಾಗಲಿ ಬರುವ ಕಲೆಯಲ್ಲ ಅದೊಂದು ಅದ್ಭುತ ಕಲೆ ಎನ್ನಬಹದು. ಯಾಕೆಂದರೆ ಒಂದು ಬಾರಿ ಸುಳ್ಳು ಹೇಳಿದರೆ ಮುಗಿತು. ಅದರಿಂದ ತಪ್ಪಿಸಿಕೊಳ್ಳೋದು ಸಾಧ್ಯನಾ. ಇಲ್ಲ. ಒಂದಕ್ಕೊಂದು ಸುಳ್ಳು ಹೇಳುತ್ತಾ ಹೋಗುತ್ತಾ ಇರಬೇಕು ಅಷ್ಟೆ. ಅದೊಂದು ತರಹ ಮುತ್ತಿನ ಮಾಲೆಗೆ ಮಣಿಗಳನ್ನು ಪೊಣಿಸಿದಂತೆ ಒಂದು ವೇಳೆ ಸೀಮಿತವಾಗಿದ್ದರೆ ಮುತ್ತಿನ ಸರ ಚೆನ್ನಾಗಿರುತ್ತೆ. ಆದರೆ ಅದು ಕೂಡ ವಿಪರೀತವಾಗಿದ್ದರೆ ತನ್ನ ಕಳೆ ಮತ್ತು ಸೊಬಗನ್ನು ಕಳೆದುಕೊಳ್ಳುತ್ತದೆ. ನೀವೆ ಯೋಚಿಸಿ ಸುಳ್ಳನ್ನು ಸುಲಭವಾಗಿ ಹೇಳಲು ಸಾಧ್ಯನಾ. ಹಾಗಂತ ಸುಳ್ಳು ಹೇಳದೆ ಇರುವುದು ಸಾಧ್ಯನಾ. ನನಗಂತು ಸಾಧ್ಯವಿಲ್ಲ ಅನ್ನಿಸುತ್ತೆ. ಸತ್ಯವನ್ನು ತಲೆ ಮೇಲೆ ಹೊಡೆದಂತೆ ಹೇಳಬಹದು ಅಂತ ಹಿರಿಯರು ಹೇಳ್ತಾರೆ. ಬರಿ ಸತ್ಯ ಹೇಳುತ್ತಾ ಜೀವನದಲ್ಲಿ ಸುಳ್ಳು ಹೇಳದೆ ಇರುವುವವರು ಉಂಟಾ. ಬರಿ ಸುಳ್ಳು ಹೇಳುತ್ತಾ ಇರುವುವರು ಉಂಟಾ. ಸತ್ಯ ಮತ್ತು ಸುಳ್ಳು ಒಂದು ನಾಣ್ಯದ ಎರಡು ಮುಖದಂತೆ ಎನ್ನುವುದು ನನ್ನ ಅನಿಸಿಕೆ. ಕೆಲವೊಮ್ಮೆ ಸುಳ್ಳು ಹೇಳಲೇಬೇಕಾದ ಸಂದರ್ಭ ಬಂದೆ ಬರುತ್ತೆ. ಅದರಲ್ಲಿ ಪತ್ರಕರ್ತರಾದವರಿಗೆ ಮೊದಲ ಬರುತ್ತೆ ಅಂತ ಕಾಣುತ್ತೆ. ಸುಳ್ಳು ಹೇಳದೇ ಇರುವ ಪತ್ರಕರ್ತ ಇರಲು ಸಾಧ್ಯನಾ .ಇಲ್ಲ ಯಾಕೆಂದರೆ. ಸುಳ್ಳು ಎಂಬುದೊಂದು ಪ್ರಚಾರದ ಹುಚ್ಚು ಇರುವವರ ಜೊತೆಗಿನ ಸ್ನೇಹ ಬಾಂಧವ್ಯವನ್ನು ಗಟ್ಟಿಗೊಳಿಸುವ ಮಾಧ್ಯಮ. ಸರ್ ನಮಸ್ಕಾರ ಹೇಗಿದ್ದಿರಿ ಚೆನ್ನಾಗಿದ್ದಿರಾ ಮನೆಯಲ್ಲಿ ಹೇಗೆ ಎಲ್ಲರೂ ಚೆನ್ನಾಗಿದ್ದಾರ ಅಂತ ತೀರಾ ಆತ್ಮೀಯರಂತೆ ಒಬ್ಬರು ಬೆಳಂಬೆಳಗ್ಗೆ ಕರೆ ಮಾಡುತ್ತಾರೆ. ಹಾಗಂತ ಅವರಿಗೆ ಪತ್ರಕರ್ತನ ಕುಟುಂಬ ಜೀವನದ ಬಗ್ಗೆ ಏನೇನು ಗೊತ್ತಿರುವುದಿಲ್ಲ. ಆದರೂ ಅವರು ವಿಚಾರ ಮಾಡುತ್ತಾರೆ. ಅವರಿಗೆ ಮದುವೆಯಾಗಿದೆಯೋ ಇಲ್ಲವೋ ಎನ್ನವುದು ಕೂಡ ಕೆಲವರಿಗೆ ಗೊತ್ತಿರುವುದಿಲ್ಲ. ನಿಮ್ಮ ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರ ಸರ್. ಅಂತ ವಿಚಾರಿಸುತ್ತಾರೆ. ಮತ್ತೊಮ್ಮೆ ಕೆಲವರು ಸರ್ ನಿಮ್ಮ ಪತ್ರಿಕೆಯಲ್ಲಿ ನಮ್ಮ ಸುದ್ದಿ ತುಂಬಾ ಚೆನ್ನಾಗಿ ಬಂದಿದೆ ಅಂತಾರೆ. ಆ ಸುದ್ದಿ ಪ್ರಕಟವಾಗಿರದಿದ್ದರೂ ಕೂಡ .ಆಗ ಅವಕ್ಕಾಗುವ ಸರದಿ ಪತ್ರಕರ್ತನದಾಗಿದ್ದರೂ ಕೂಡ ಆಗ ಅವನು ಸುಳ್ಳು ಹೇಳಲೆಬೇಕಾದ ಅನಿರ್ವಾತೆ ಇರುತ್ತೆ. ಹೀಗೆ ಕೆಲವು ದಿನಗಳ ಹಿಂದೆ ಸ್ನೇಹಿತನೊಬ್ಬ ತನಗೆ ಪರಿಚಯದವನು ಭೇಟಿಯಾದಾಗ ಪರಸ್ಪರ ನಮಸ್ಕಾರ ನಡೆದ ನಂತರ ಅವನು ಸರ್ ನಿಮ್ಮ ಪತ್ರಿಕೆಯಲ್ಲಿ ನಮ್ಮ ಸುದ್ದಿ ಬರಲೆ ಇಲ್ಲ ಎಂದು ಬಿಡಬೇಕೆ. ಆಗ ಇವನು ಒಂದು ಬಾರಿಯಲ್ಲ ಸುಳ್ಳು ಹೇಳಿ ತಪ್ಪಿಸಿಕೊಂಡರಾಯಿತು ಅಂತ ಹರೆ ನಿಮ್ಮ ಸುದ್ದಿ ಅವತ್ತೆ ಬಂದಿದೆಯಲ್ಲರೀ ನೀವು ನೋಡಿಲ್ಲಂತ ಕಾಣುತ್ತೆ. ಅಂದು ಬಿಟ್ಟ. ಅಷ್ಟಕ್ಕೆ ಬಿಡದಾ ಆ ಆಸಾಮಿ ಇಲ್ಲ ಸರ್ ಇತ್ತಿಚಿಗೆ ನಿಮ್ಮ ಪತ್ರಿಕೆ ನಮ್ಮ ಮನಿಗೆ ಸರಿಯಾಗಿ ಬರುತ್ತಿಲ್ಲ. ಪೇಪರ್ ಹಾಕುವ ಹುಡುಗ ಸರಿಯಾಗಿ ಹಾಕುತ್ತಿಲ್ಲ ಅವನಿಗೆ ಯಾವುದರಲ್ಲಿ ಹೆಚ್ಚು ಲಾಭವಿದೆ ಅದನ್ನು ಹಾಕುತ್ತಾನಂತೆ ಕಾಣುತ್ತೆ ಅಂತ ಪೇಪರ್ ಹಾಕುವ ಹುಡುಗನ ಮೇಲೆ ಹರಿಹಾಯುತ್ತಾ ಸರ್ ನೋಡುತ್ತೇನೆ ತುಂಬಾ ಧನ್ಯವಾದಗಳು. ನಿಮ್ಮಂಥವರಿಂದ ನಾವು ಬೆಳೆದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದದ್ದು ಅಂತ ಜಂಬ ಕೊಚ್ಚಿಕೊಂಡ. ದೊಡ್ಡ ಮಟ್ಟಕ್ಕೆ ಅಂದರೆ ಸಂಘಟನೆಯ ಜವಾಬ್ದಾರಿ ಅಷ್ಟೆ ಕೆಲವರಿಗೆ ಸಂಘಟನೆಯಲ್ಲಿ ಪದಾಧಿಕಾರಿ ಹುದ್ದೆ ಪಡೆಯುವುದದೆಂರೆ ಒಂದು ದೊಡ್ಡ ಸಾಧನೆ ಆದರೆ ಅವರು ಮಾಡುವುದು ಏನು ಇಲ್ಲ. ಸುದ್ದಿ ಬಂದಿದೆ ಅಂತರ ಗೊತ್ತಾದ ಮೇಲೆ ಬನ್ನಿ ಸರ್ ಟೀ ಕುಡಿಯೋಣ. ಅಂತ ಬಲವಂತದಿಂದ ಚಹಾ ಕುಡಿಸಲಿಕ್ಕೆ ಕರೆದೊಯ್ದ. ಅಲ್ಲಿ ಸರ್ ಎಂದಿನ ಪತ್ರಿಕೆಯಲ್ಲಿ ಬಂದಿದೆ. ಅಂತ ಕೇಳಬೇಕೆ .ಟಿವಿ ಮಾಧ್ಯಮದವರಾದರೆ ಏನೋ ಸಬೂಬು ಹೇಳಿ ತಪ್ಪಿಸಿಕೊಳ್ಳುವುದನ್ನು ನೋಡಿ ತಿಳಿದುಕೊಂಡಿದ್ದ ನನ್ನ ಸ್ನೇಹಿತ ಸುಳ್ಳಿನ ಬಿಲದಲ್ಲಿ ತನಗರಿವಿಲ್ಲದಂತೆ ಬಿದ್ದಿದ್ದ ಆಗ ಮತ್ತೊಂದು ಸುಳ್ಳು ಹೇಳೋದು ಈಗ ಮತ್ತೆ ಅನಿರ್ವಾವಾಯಿತು. ಯಾಕೆಂದರೆ ಅವನು ಟೀಗೆ ಆರ್ಡರ್ ಮಾಡುತ್ತಾ ಕೇಳಿದ್ದ. ಮೊನ್ನೆ ಬಂದಿತ್ತು. ಅಂತ ಹೇಳಿ ನಿಟ್ಟುಸಿರು ಬಿಟ್ಟು ನನ್ನ ಕಡೆ ನೋಡಿದ ಪೆಚ್ಚು ಮುಖದಿಂದ ಅನಿರೀಕ್ಷತ ದೃಷ್ಟಿಯಿಂದ ನನ್ನ ಮುಗುಳ್ನಗೆ ಅವನಿಗೆ ಬಾಣದಂತೆ ನಾಟಿತು ಅಂತ ಕಾಣುತ್ತೆ. ಚಹಾ ಬರುವದರಲ್ಲಿತ್ತು ಬೇಗ ಚಹಾ ತಾರಪ್ಪ ಅರ್ಜೆಂಟ್ ಪ್ರೆಸ್ ಮೀಟ್ ಇದೆ. ಹೋಗಬೇಕು ಅಂದ. ನಿಜ ಹೇಳಬೇಕು ಅಂದ್ರೆ ಅವತ್ತು ಯಾವ ಪ್ರೆಸ್ ಮೀಟು ಇರಲಿಲ್ಲ. ಸುಳ್ಳಿನ ಸರಮಾಲೆಯಿಂದ ತಪ್ಪಿಸಿಕೊಳ್ಳಬೇಕಾಗಿತ್ತು ಅಷ್ಟೆ ಅವನ ಗಡಿಬಿಡಿ ಕಂಡು ನನ್ನಲ್ಲೇನೋ ವಿಚಿತ್ರಭಾವನೆಯಿಂದ ಮುಗುಳ್ನಗೆ ತನ್ನಿಂದ ತಾನೆ ಹೊರಸೋಸುವುದನ್ನು ಕಂಡ ಸಿಗು ಮಗನೆ ನೀನು ಯಾವಾಗದರೂ ಮಾಡುತ್ತೇನೆ ಎಂಬಂತೆ ಕಣ್ಣುಸನ್ನೆ ಮಾಡಿದ. ಟೀ ಏನೋ ಬಂತು ಕುಡಿದ ಮೇಲೆ ಬಿಲ್ಲು ಪಾವತಿಸುವಾಗ ಸರ್ ಇರಲಿ ಇದೇನು ದೊಡ್ಡದು ನಿಮ್ಮ ಸಹಾಯದ ಮುಂದೆ. ಅಂತ ಬಿಲ್ಲು ಕೊಟ್ಟು ಹೊರಬಂದ ಕೂಡಲೇ ನಮ್ಮ ಸ್ನೇಹಿತ ಬರ್ತಿವಿ ಅಂತ ಇನ್ನೇನು ಹೊರಡಲನುವಾಗುವಷ್ಟರಲ್ಲಿ ಆ ಆಸಾಮಿ ಸರ್ ಅವತ್ತಿನ ಪತ್ರಿಕೆ ಸಿಗದಿದ್ದರೆ ನಿಮ್ಮ ಕಚೇರಿಗೆ ಬರುತ್ತೇನೆ ಸ್ವಲ್ಪ ಕೊಡ್ತಿರಾ ನನಗೆ ಪೈಲ್ ಗೆ ಬೇಕು ಅನ್ನಬೇಕೆ. ಆಗ ನೊಡ್ಬೇಕಿತ್ತು ಇವನ ಮುಖ. ಹೆಂಗಾದರು ಮಾಡಿ ತಪ್ಪಿಸಿಕೊಳ್ಳಬೇಕಾಗಿತ್ತು ಸರಿ ಬಾ ಅಂತ ಹೇಳಿ ಹೊರಟೆಬಿಟ್ಟ. ಸಂಜೆ ಸರಿಯಾದ ಸಮಯಕ್ಕೆ ಆ ಆಸಾಮಿ ಕಚೇರಿಗೆ ಹಾಜರಾಗಿಬಿಟ್ಟ. ಆ ಸಮಯದಲ್ಲಿ ಇವನಿರಲಿಲ್ಲ ಸರ್ ಇಲ್ಲವಾ ಸರ್ ಅಂತ ಕೇಳಿ ಇಲ್ಲ ಅಂದಿದ್ದಕ್ಕೆ ನಂತರ ಬರುತ್ತೇನೆ ಅಂತ ಹೊರಡುವುದರಲ್ಲಿ ನನ್ನ ಸ್ನೇಹಿತ ಬಂದೆ ಬಿಡುವುದೆ. ತಪ್ಪಿಸಿಕೊಳ್ಳುವ ಹಾಗಿಲ್ಲ. ಸುಳ್ಳು ಹೇಳುವ ಹಾಗೂ ಇಲ್ಲ. ಸರ್ ಸ್ವಲ್ಪ ಅಂತ ಹಲ್ಲು ಗಿಂಜಿದ ಆ ಆಸಾಮಿ. ಹಳೆ ಪತ್ರಿಕೆಯ ಬಂಡಲ್ ಹುಡುಕಿದ. ತಡಕಾಡಿದ ಸುದ್ದಿ ಬಂದಿದ್ದರೆ ತಾನೆ ಪತ್ರಿಕೆ ತರೋದು. ಕಡೆಗೆ ಕಡೆಗೆ ನಿಜ ಹೇಳಲೇಬೇಕು ಆದರೆ ಸ್ವಾಭಿಮಾನ ಕಾಡುತ್ತಿದೆ. ಮತ್ತೊಬ್ಬ ರಿಪೋರ್ಟರ್ ಹತ್ತಿರ ಬಂದು ಏನೋನು ಗುಸು ಗುಸು ಮಾತಾಡಿದ. ಕಡೆಗೆ ಅವನ ಬಳಿ ಬಂದು ಅವತ್ತು ನಾನೆ ಸುದ್ದಿಯನ್ನು ಹಾಕಿದ್ದೇ ಆದರೆ ಅಂದು ಅದು ಪ್ರಕಟವಾಗಿಲ್ಲ ನನ್ನದು ಸ್ವಲ್ಪ ಅರ್ಜೆಂಟೆ ಇತ್ತು. ಹೋಗಿದ್ದೆ ಯಾವುದೋ ಪ್ರಮುಖ ಸುದ್ದಿ ಬಂದಿದೆ ಅಂತ ನಿನ್ನದೆ ಸುದ್ದಿ ತೆಗೆದು ಅದನ್ನು ಹಾಕಿದ್ದಾರೆ ಅಂತ ಮತ್ತೊಂದು ಸುಳ್ಳು ಹೇಳಿದ. ಹೌದಾ ಸರ್ ಪರವಾಗಿಲ್ಲ ಆ ಸುದ್ದಿಯಲ್ಲಿ ಸ್ವಲ್ಪ ನನ್ನದೆ ಲೀಡ್ ಮಾಡ್ಬೇಕಿತ್ತು ಸರ್ ಅನ್ನಬೇಕೆ. ಬಳಿಯ ಕುರ್ಚಿಯಲ್ಲಿ ಕುಳಿತು ಸರ್ ಇನ್ನು ಎರಡು ಹೆಸರು ಹೆಚ್ಚಿಗೆ ಸೇರಿಸಬೇಕು ದಯವಿಟ್ಟು ಅಂತ ಕುಳಿತ. ಕೇವಲ ಅರ್ದ ಕಪ್ ಚಹಾ ಎಷ್ಟು ಸಮಸ್ಯೆಯನ್ನ ಇಲ್ಲಿ ನನ್ನ ಸ್ನೇಹಿತನಿಗೆ ತಂದೊಡ್ಡಿತ್ತೆಂದರೆ ಬೇರೆಯವರ ಚಹಾ ಕುಡಿದು ಜೀವನದಲ್ಲಿ ಏನೊ ದೊಡ್ಡ ತಪ್ಪು ಮಾಡಿದ್ದೇನೆ ಅನ್ನುವಂಗಾಗಿತ್ತು. ಸಾಮಾನ್ಯವಾಗಿ ಪತ್ರಕರ್ತರಾದವರಿಗೆ ಇಂತಹ ಸಂದರ್ಭಗಳು ಬಹಳಷ್ಟು ಗತಿಸುತ್ತಿರುತ್ತವೆ. ಹೆಸರು ಸೇರಿಸುವುದು ಮತ್ತು ಲಿಡ್ ಮಾಡುವುದು ಏನೋ ಸರಿ. ಯಾಕೆಂದರೆ ಅದೇನು ಪ್ರಮುಖ ಸುದ್ದಿಯಲ್ಲವೆಂದು ಕೈಬಿಟ್ಟಿದ್ದ ಸುದ್ದಿ ಈಗ ಅವನಿಗೆ ಭೂತಪ್ರೇತವಾಗಿ ಒಟ್ಟೊಟ್ಟಿಗೆ ಕಾಡಿತ್ತು. ಆ ಆಸಾಮಿ ಕುರ್ಚಿ ಬಿಟ್ಟು ಹೇಳುತ್ತಿಲ್ಲ. ಇನ್ನು ಸುದ್ದಿ ಮಾಡಿಲ್ಲ ಅಂತ ಹೇ:ಳುವುದೇ ಇಲ್ಲಿ ಸತ್ಯ ಕಹಿ ಅನ್ನಿಸಿದರೂ ಹೇಳಬಹುದೇನೋ ಆದರೆ ಅದು ಹೇಗೆ .ಹೇಳಿದರೂ ಸುದ್ದಿ ಮಾಡಲೇಬೇಕು. ಸುದ್ದಿ ಮಾಡದೆ ವಿಧಿಯಿಲ್ಲ. ಆದರೂ ಆ ಸುದ್ದಿ ಬೆಳಗ್ಗೆ ಪತ್ರಿಕೆಯಲ್ಲಿ ಪ್ರಿಂಟ್ ಆಗುತ್ತೆ ಅಂತ ಬರವಸೆ ಯಾರಿಗಿದೆ. ಅದನ್ನು ಉಪ ಸಂಪಾದಕರು. ಮುಖ್ಯ ಉಪ ಸಂಪಾದಕರು. ನಿರ್ಣಯಿಸಿದ ಮೇಲೆ ತಾನೆ. ಒಂದು ಸಣ್ಣ ಪದಾಧಿಕಾರಿಗಳ ನೇಮಕ ಸುದ್ದಿಗಾಗಿ ಅವರಲ್ಲಿ ವಿನಮ್ರತೆಯಿಂದ ಹೇಳಬೇಕು. ಅದಕ್ಕು ಸ್ವಾಭಿಮಾನ. ನೋಡಿ ಒಂದು ಸುಳ್ಳು ಹೇಗೆ ಮನುಷ್ಯನನ್ನು ಅಧಿರನನ್ನಾಗಿಸುತ್ತೆ. ಹಾಗಾದರೆ ಸುಳ್ಳು ಹೇಳದೆ ಇರಲು ಸಾಧ್ಯವಾ???????
------------------------------------------ ಮೌನಯೋಗಿ