Monday 17 November 2014

ಹಕ್ಕಿ ಹಾರುತಿದೆ ನೋಡಿರೋ-----ನನ್ನ ಕವನ

ನನ್ನ ಕೆಲವು ಕವನಗಳಲ್ಲಿ ನನಗೆ ಹೆಚ್ಚಾಗಿ ಮೆಚ್ಚುಗೆಯಾದ ಕವನ ನಿಮಗೂ ಹಿಡಿಸಿದಲ್ಲಿ ಒಂದು ಸಣ್ಣ ಲೈಕ್ ಮಾಡಿ............
............ಹಕ್ಕಿ ಹಾರುತಿದೆ ನೋಡಿರೋ.............

--
ಹಕ್ಕಿ ಹಾರುತಿದೆ ನೋಡಿರೋ
ಭ್ರಷ್ಠಾಚಾರಿಗಳ, ಅತ್ಯಾಚಾರಿಗಳ
ಪುಂಡ, ಪೋಕರಿಗಳ ನೆತ್ತಿಮ್ಯಾಲೆ
ಹಕ್ಕಿ ಹಾರುತಿದೆ ನೋಡಿರೋ                                 (ಪಲ್ಲವಿ)
                   ವಿದೇಶಿ ಕಂಪನಿಗಳಿಗೆ ಭೂಮಿ ಕೊಟ್ಟಿ
                   ಉಳುವಾಯೋಗಿಗೆ ಉರುಳು ಕೊಟ್ಟಿ
                   ದನಕರುಗಳ ನೆತ್ತಿಮ್ಯಾಲೆ
                   ಹಕ್ಕಿ ಹಾರುತಿದೆ ನೋಡಿರೋ
ಕಪ್ಪುಹಣದಲ್ಲಿ ಮಂದಿರ ಕಟ್ಟಿ
ಮಂದಿರಕೊಬ್ಬ ಪೂಜಾರಿನ್ನಿಟ್ಟಿ
ಭಕ್ತಗಣದ ನೆತ್ತಿಮ್ಯಾಲೆ
ಹಕ್ಕಿ ಹಾರುತಿದೆ ನೋಡಿರೋ
                    ಜಾತಿಗೊಂದು ಮೂರ್ತಿ ಕೊಟ್ಟಿ
                    ಸ್ನೇಹ ಸಂಬಂಧಕ್ಕೆ ಕೊಳ್ಳಿ ಇಟ್ಟಿ
                    ಮಂದಿರ ಮಸಿದಿಗಳ ನೆತ್ತಿಮ್ಯಾಲೆ
                    ಹಕ್ಕಿ ಹಾರುತಿದೆ ನೋಡಿರೋ
ಗಲ್ಲಿ ಗಲ್ಲಿಗಳಲ್ಲಿ ದ್ವಜವ ನೆಟ್ಟಿ
ಕಾಯಿದೆ ರೂಪಿಸಿ ಕೈಗೆ ಕೊಟ್ಟಿ
ಕಾಟಾಚಾರಿಗಳ ನೆತ್ತಿಮ್ಯಾಲೆ
ಹಕ್ಕಿ ಹಾರುತಿದೆ ನೋಡಿರೋ
                      ಹೋರಾಟದಿ ಪಡೆದಿ ಪ್ರಚಾರ ಬಿಟ್ಟಿ
                      ಹಸಿದವರ ಬಾಳಿಗೆ ಬೆಂಕಿ ಇಟ್ಟಿ
                      ನಂಬಿದ ಜನರ ನೆತ್ತಿಮ್ಯಾಲೆ
                      ಹಕ್ಕಿ ಹಾರುತಿದೆ ನೋಡಿರೋ
ಕಳ್ಳರ ಕೈಗೆ ಪಡಿತರ ಕೊಟ್ಟಿ
ಬಡಬಗ್ಗರಿಗೆಂದು ಚೀಟಿ ಕೊಟ್ಟಿ
ಕಾಳಸಂತೆಕೋರರ ನೆತ್ತಿಮ್ಯಾಲೆ
ಹಕ್ಕಿ ಹಾರುತಿದೆ ನೋಡಿರೋ
                          ಅಕ್ರಮಗಳ ತನಿಖೆಗೆ ಆಯೋಗ ಕಟ್ಟಿ
                          ವರದಿ ಸೇರಿಸಿದಿ ಕಸದ ಬುಟ್ಟಿ
                          ದೂರಿನ ಅರ್ಜಿಗಳ ನೆತ್ತಿಮ್ಯಾಲೆ
                           ಹಕ್ಕಿ ಹಾರುತಿದೆ ನೋಡಿರೋ

ಹಕ್ಕಿ ಹಾರುತಿದೆ ನೋಡಿರೋ
ಭ್ರಷ್ಠಾಚಾರಿಗಳ, ಅತ್ಯಾಚಾರಿಗಳ
ಪುಂಡ, ಪೋಕರಿಗಳ ನೆತ್ತಿಮ್ಯಾಲೆ
ಹಕ್ಕಿ ಹಾರುತಿದೆ ನೋಡಿರೋ

----------- ಮೌನಯೋಗಿ.......
ಇದನ್ನು ಕಾವ್ಯನಾಮವಾಗಿಟ್ಟುಕೊಂಡಿದ್ದೇನೆ.......

No comments: