ಮೌಢ್ಯತೆಯ ಪೆÇರೆ ಕಳಚಲು ಲೇಖನಿ ಹಿಡಿದ ಶಾಸ್ತ್ರಿಗಳು
- ಮಹೇಶ ಕಲಾಲ್
ಮೌಢ್ಯತೆಯ ಪೆÇರೆ ಕಳಚಿ ಸಾಹಿತ್ಯ ಗಂಗೆಯ ಹರಿಸಲು ಜನರನ್ನು ಪ್ರೇರೆಪಿಸಲೆಂಬಂತೆ ತಮ್ಮ ಮನೆಯ ಕಾರ್ಯವನ್ನು ಸಾರ್ವಜನಿಕವಾಗಿಸಿ ಆ ಸಮಯವನ್ನು ಸಾಹಿತ್ಯ, ಚರ್ಚಾ ಕೂಟಗಳಿಗೆ ಸದ್ವಿನಿಯೋಗಿಸುತ್ತಿರುವ ಹಿರಿಯ ಸಾಹಿತಿ ಬಸವರಾಜ ಶಾಸ್ತ್ರಿಯವರ ಸೇವಾಕಾರ್ಯ ಶ್ಲಾಘನೀಯವಾದದ್ದು.ಕಸವು ರಸವಾಗಲಿ, ಧ್ಯೇಯೋz್ದÉೀಶಗಳು ಅದ್ವಿತೀಯ ಬೀಜಾಕ್ಷರಗಳಾಗಲಿ ಎಂಬ ದೃಷ್ಠಿಯಿಂದ ಪ್ರತಿಯೊಂದು ಕಾರ್ಯಕ್ಕೂ ಸಾಹಿತ್ಯ ಸೇವೆಯ ಅನುಪಮ ಅವಕಾಶವನ್ನು ಒದಗಿಸಿ, ಸಾಹಿತ್ಯ ಸೃಷ್ಠಿಯ ಜೊತೆಗೆ ವಾಗ್ದೇವಿಯ ವರಪುತ್ರರಿಗೆ ಆಹ್ವಾನವಿಯುತ್ತ ಇಳಿ ವಯಸ್ಸಿನಲ್ಲಯೂ ಕ್ರಿಯಾಶೀಲ ವ್ಯಕ್ತಿತ್ವದಿಂದ ಸದಾ ತಾ ಮುಂದು ಎನ್ನುವು ಘೋಷಾ ವಾಕ್ಯದೊಂದಿಗೆ ಹಗಲಿರುಳೂ ಸೇವಾಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಅವರ ಅದಲು-ಬದಲು ಕಥಾ ಸಂಕಲನ ಸತ್ಯದ ದಾರಿ ಹುಡುಕ ಹೊರಟ ಹರಿಶ್ಚಂದ್ರನ ಪಾಡಿನಂತಿದೆ.
ಮಹಿಳೆಯನ್ನು ಇಳೆಯಷ್ಟು ಕ್ಷಮಾಗುಣ ಸಂಪನ್ನಳು ಎಂಬಂತೆ ಬಸವರಾಜ ಶಾಸ್ತ್ರಿಯವರು ಇಲ್ಲಿ ಚಿತ್ರಿಸಿದ್ದಾರೆ. ತಮ್ಮ ಹಲವು ಕಥೆಗಳಲ್ಲಿ ಸ್ತ್ರೀ ಪ್ರಾಧ್ಯಾನ್ಯತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಪುರುಷ ಪಾತ್ರಗಳ ಪ್ರಭಾವವಿದ್ದರೂ ಅಲ್ಲಿಯೂ ಮಹಿಳೆಯೇ ಕಥಾವಸ್ತುವನ್ನು ಪ್ರತಿನಿಧಿಸುತ್ತಾಳೆ. ಅವರ ಮಗ್ಗಲಿಗೆ ಬೇಕು ಮನೆಗೆ ಬೇಡ, ತ್ಯಾಗ, ವಾತ್ಸಲ್ಯ, ಅದಲು -ಬದಲು ಹೀಗೆ ತಮ್ಮ ಕತೆಗಳಲ್ಲಿ ಸ್ತ್ರೀಯನ್ನು ವಿಭಿನ್ನವಾಗಿ ಚಿತ್ರಿಸಿರುವುದು ಅವರ ಕಥಾಶೈಲಿಯಲ್ಲಿ ನಾವು ಕಾಣಬಹದು.
ಬಡತನವೆಂಬುದು ಜೇಡರ ಬಲೆ ಎಂಬ ಕಥಾ ವಸ್ತುವುಳ್ಳ ತ್ಯಾಗ ಕಥೆಯಲ್ಲಿ . ಶಿವನೇ ಇದೆಂತಹ ಪರೀಕ್ಷೆಯ ಕಾಲ. ಇವತ್ತು ಸಿಕ್ಕಿರುವುದು ಕೇವಲ ಅರ್ಧ ಸೇರು ಜೋಳ ಮಾತ್ರ. ಅದರಲ್ಲಿ ಮಾಡಿದ ಮೂರೇ ಮೂರು ರೊಟ್ಟಿಗಳನ್ನು ಆಗಲೇ ಮೂರು ಮಕ್ಕಳಿಗೆ ಹಂಚಿದ್ದಾಗಿದೆ. ಉಳಿದುದರಲ್ಲಿ ಅಂಬಲಿ ಕುದಿತಾ ಇದೆ. ಇದು ನನ್ನ ಮತ್ತು ಆ ಮಕ್ಕಳ ತಂದೆಯ ಪಾಲಿನದು ನಮ್ಮಿಬ್ಬರ ಪಾಲಿನದನ್ನು ಹಸಿದವಗೆ ಬಡಿಸುವ ಅಧಿಕಾರವಿದೆ. ಮೊದಲು ರೊಟ್ಟಿಯನ್ನು ಕೊಡದೆ ಕೇವಲ ಅಂಬಲಿಯನ್ನೇ ಬಡಿಸುವುದು ಹೇಗೆ ಎಂದು ಚಿಂತಿಸುತ್ತಾಳೆ.
ಅಂಬಲಿಯು ಬಡತನದ ಸಂಕೇತ. ಅದನ್ನು ತೋರ್ಪಡಿಸುವುದು ಆ ಮನೆಯೊಡತಿ ಅನ್ನಪೂರ್ಣಮ್ಮಳಿಗೆ ಬೇಕಿಲ್ಲ. ಬಡತನ ಸ್ವಾಭಿಮಾನದ ಬದುಕನ್ನು ಕಲಿಸುತ್ತದೆ. ಎನ್ನುವುದಕ್ಕೆ ಈ ಕಥೆಯೇ ಸಾಕ್ಷಿಯಾಗಿದೆ. ಹಾಗಾಗಿ ಅನ್ನಪೂರ್ಣಮ್ಮಳು ತನ್ನ ಮಕ್ಕಳ ಕೈಯಲ್ಲಿನ ಒಂದೊಂದೆ ರೊಟ್ಟಿಯನ್ನು ತೆಗೆದುಕೊಂಡು ಹೋಗಿ ಆ ರೈತನಿಗೆ ಊಟ ಮಾಡಲು ಕೊಡುತ್ತಾಳೆ. ಮಕ್ಕಳ ಕೈಯಿಂದ ರೊಟ್ಟಿ ತೆಗೆದುಕೊಂಡು ಅತಿಥಿಗೆ ಉಣ ಬಡಿಸುವುದು ಅನ್ನಪೂರ್ಣಮ್ಮಳ ಸ್ವಾಭಿಮಾನದ ಹೃದಯವನ್ನು ತೋರಿಸುತ್ತದೆ.
ಹಸಿವೆಯಿಂದ ಸಾಯುವಂತಾದರೂ ಜಾತಿ ಬಿಡಲೊಲ್ಲೆ ಎನ್ನುವ ಮಲ್ಲಪ್ಪನನ್ನು ಜಾತಿ ಎಂಬ ಪಾಷಾಣಕ್ಕೆ ಬಲಿಯಾದವನಂತೆ ಚಿತ್ರಿಸಿದ್ದರೂ ಅವನ ಮೂಲಕ ಮಠಾಧೀಶರು, ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಜಾತಿಯನ್ನೇ ಬಂಡವಾಳ ಮಾಡಿಕೊಂಡಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿ, ಇಂದಿನ ಸಮಾಜದಲ್ಲಿ ಜಾತಿ ಪ್ರಾದಾನ್ಯತೆ ಎಷ್ಟರಮಟ್ಟಿಗೆ ತನ್ನ ಪ್ರಭಾವವನ್ನು ಬೀರಿದೆ ಎಂಬುದನ್ನು ಇಲ್ಲಿ ಚಿತ್ರಿಸಿದ್ದಾರೆ.
ವಾತ್ಸಲ್ಯ ಎಂಬ ಕಥೆಯಲ್ಲಿ ತಾಯಿ ಬೆಕ್ಕು ತನ್ನ ಮರಿಗಳಿಗೆ ಹಾಲುಣಿಸುವುದನ್ನು, ತದೇಕಚಿತ್ತದಿಂದ ನೋಡಿದ ಶಾಂತಮ್ಮನವರ ಮಾತೃ ಹೃದಯ. ಕೆಲವು ದಿನಗಳ ಹಿಂದೆ ಅಕಾಲಮರಣವನ್ನಪ್ಪಿದ ಮಗನನ್ನು ನೆನೆಸಿಕೊಂಡು ಕೊರಗುವಂತೆ. ತಾಯಿ ವಾತ್ಸಲ್ಯದ ಚಿತ್ರಣ ಚಿತ್ರಿಸಿದ್ದು , ಬಸವರಾಜ ಶಾಸ್ತ್ರಿಗಳು ಕಥೆಯಲ್ಲಿ ಅದೇಷ್ಟು ತಲ್ಲಿನರಾಗಿ ನಿಜ ಚಿತ್ರಣ ನೀಡಿದ್ದಾರೆಂದರೆ. ಸ್ವತಹಃ ಕಣ್ಣಾರೆ ಕಂಡದ್ದನ್ನು ತಮ್ಮ ಲೇಖನಿಯ ಮೂಲಕ ರಚಿಸಿದ್ದಾರೆ ಎನ್ನುವಂತೆ ಬಾಸವಾಗುತ್ತಿದೆ. ಇದು ಕಥೆಗಾರರ ಜಾಣ್ಮೆಗೆ ಹಿಡಿದ ಕನ್ನಡಿಯಾಗಿದೆ.
ತಾಯಿಯನ್ನು ವಾತ್ಸಲ್ಯಮಯಿ ಕರುಣಾಮಯಿ ಎನ್ನುವ ಮಾತನ್ನು ನಿಜಗೊಳಿಸಲೋಸುಗವೇ ಚಿತ್ರಿಸಿದ ಕಥೆಯಲ್ಲಿ ತಾಯಿಯ ಬಾಂಧವ್ಯವು ಮನೋಜ್ಞವಾಗಿ ರೂಪಿಸಿ ಬೆಕ್ಕಿಗೆ ಹಾಲುಣಿಸುವ ಮೂಲಕ ಪುತ್ರಶೋಕವನ್ನು ಮರೆಯುವಂತೆ ಮಾಡಿದ್ದಾರೆ.
ಮಗ್ಗಲಿಗೆ ಬೇಕು ಮನೆಗೆ ಬೇಡ ಎಂಬ ಕಥೆಯಲ್ಲಿ ಹಿಂದೆ ಹಳ್ಳಿಗಳಲ್ಲಿ ಊರಗೌಡರ ದರ್ಪ ದಬ್ಬಾಳಿಕೆ ಹೇಗೆ ನಡೆಯುತ್ತಿತ್ತು. ಬಡತನದಲ್ಲಿರುವ ಹಳ್ಳಿಗರ ಪರಿಸ್ಥಿತಿ ಹೇಗೆ ದುರ್ಬಳಕೆಯಾಗುತ್ತಿತ್ತು ಎನ್ನುವ ಸನ್ನಿವೇಶಗಳನ್ನು ಕಥೆಗಾರರು ಪಾತ್ರಗಳ ಸಂಭಾಷಣೆಯಲ್ಲಿ ವ್ಯಕ್ತವಾಗುವ ಆಕ್ರೋಶಭರಿತ ನುಡಿಗಳಿಂದ ರಚಿಸಿದ್ದಾರೆ.
ಅರೆಮಲ್ಲಿ ಅದ್ಯಾಕೆ ಆಟು ದೂರ ನಿಂತಿ. ಇಲ್ಲಿ ಬಾ. ಎಂದಾಗ ಆ ಗೌಡ್ರೆ ನಾನಾ ಎಂದು ಆಶ್ಚರ್ಯಚಕಿತಳಾದ ಮಲ್ಲಿಗೆ. ಆ ನೀನೆ ಇಲ್ಲಿ ಯಾರು ಇಲ್ಲ. ನೀ ನಿಂತ ನೆಲದ ಮೇಲೆನೆ ನಾನು ನಿಂತಿದ್ದಿನಿ ಎಲ್ಲರೂ ಒಂದೆನೇ ಬಾ ಎಂದು ಮಲ್ಲಿಯ ಕೈಹಿಡಿದು ಎಳೆದಿದ್ದನ್ನು ಗೌಡರ ಬಾಯಿಂದ ಜಾತಿ ಸೂತಕ ಮಾನವ ನಿರ್ಮಿತ ಎನ್ನುವುದನ್ನು ಚಿತ್ರಿಸಿದ್ದಾರೆ.
ಅದಲು ಬದಲು ಕಥೆಯಲ್ಲಿ ವರದಕ್ಷಿಣೆ ಪಿಡುಗಿನ ವಿರುದ್ಧ ಸಮರ ಸಾರಿದ್ದಾರೆ.
ಯಾವ ಸೌದೆಯಾದರೇನು ಎಂಬ ಕಥೆಯಲ್ಲಿ ಇಳಿವಯಸ್ಸಿನಲ್ಲೂ ಕಥೆಯಲ್ಲಿ ರಸಿಕತೆಯ ತೋರಣವನ್ನ ನಿರ್ಮಿಸಿದ್ದಲ್ಲದೆ ಭಾರತೀಯ ಸಂಸ್ಕøತಿಯ ಪುನರುಜ್ಜೀವನಗೊಳಿಸಿದ್ದಾರೆ.
ತೃಪ್ತನಾದ ಮಲ್ಲಯ್ಯ ಎಂಬ ಕಥೆಯಲ್ಲಿ ಭಕ್ತ ಮತ್ತು ಭಕ್ತಿಯ ನಡುವಣ ಸಂಕೇತವೆಂಬಂತೆ ತೃಪ್ತನಾದ ಮಲ್ಲಯ್ಯ ಎಂಬುದರ ಮೂಲಕ ಭಕ್ತಿಯ ಮಾರ್ಗವನ್ನು ತೋರಿಸಿದ್ದಾರೆ.
ಋಣಮುಕ್ತ ಕಥೆಯಲ್ಲಿ ಲಂಚದ ಆಮೀಷಕ್ಕೆ ಒಳಗಾಗದವರಿಗೆ ವರ್ಗಾವಣೆಯ ಶಿಕ್ಷೆಯಂತು ಖಂಡಿತಾ ಇದ್ದೆ ಇದೆ. ವ್ಯವಸ್ಥೆಯನ್ನ ನಿಯಂತ್ರಿಸುತ್ತಿರುವುದು ಗುಮಾಸ್ತಿ ವ್ಯವಸ್ಥೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ತ್ಯಾಗಮಯಿ ಭಿಕ್ಷುಕಿ ಕಥೆಯಲ್ಲಿ ಭಿಕ್ಷೆಯ ಪರಿಯ ವರ್ಣನೆ ತ್ಯಾಗಮಯಿ ಭಿಕ್ಷುಕಿ ಕಥೆಯಲ್ಲಿ ಸಮ್ಮಿಳಿತವಾಗಿದೆ. ಒಂದೊಂದು ರೀತಿಯಲ್ಲಿ ನಾವೇಲ್ಲರೂ ಭಿಕ್ಷುಕರೆ ಎಂಬುದನ್ನು ಸನ್ನಿವೇಶಗಳ ನಿರೂಪಣೆಯಿಂದ ಚಿತ್ರಿಸಿದ್ದಾರೆ.
ನಿಜ ಜೀವನದ ನೈಜ ಘಟನೆಗಳನ್ನ ಕಲ್ಪನೆಗಳ ಮೂಲಕ ಸೆರೆಹಿಡಿಯಬಲ್ಲ ಕಥಾ ಶೈಲಿಯಿಂದ ಲೇಖಕರು ತುಂಬಾ ಪಳಗಿದವರಂತೆ ಕಾಣುತ್ತಾರೆ. ಸಂಸ್ಕøತಿ ಮತ್ತು ಸಾಹಿತ್ಯದ ಒಳಹೊರಹನ್ನು ತಮ್ಮದೇ ಧಾಟಿಯ ಮೂಲಕ ಪ್ರಚುರಪಡಿಸುವಲ್ಲಿ ಲೇಖಕ ಬಸವರಾಜ ಶಾಸ್ತ್ರಿಗಳು ಅದಮ್ಯ ಉತ್ಸಾಹ ಚೇತನಶೀಲರಂತೆ ವರ್ತಿಸಿರುವುದು ಅವರ ಕಥೆಗಳಲ್ಲಿ ಕಂಡು ಬರುತ್ತದೆ.
ಜಗತ್ತಿನ ಇರುವಿಕೆಯನ್ನು ತೋರಿಸಲೋಸುಗ ಇರುವ ಏಕೈಕ ಮಾರ್ಗವೇ ಸಾಹಿತ್ಯ ಸೃಷ್ಠಿ ಎನ್ನಬಹುದು. ಪ್ರತಿಯೊಬ್ಬರು ಅನ್ನವನ್ನ ಸೃಷ್ಠಿಸಿಕೊಳ್ಳಬಹುದು, ಬಟ್ಟೆಯನ್ನ ನೆಯ್ದುಕೊಳ್ಳಬಹುದು ಆದರೆ ಸಾಹಿತ್ಯ ಹಾಗಲ್ಲ ಅದು ವಾಗ್ದೇವಿಯ ವರಪುತ್ರನಿಗೆ ಒಲಿದ ಕಾಯಕ ಅದನ್ನ ಬಸವರಾಜ ಶಾಸ್ತ್ರಿಗಳು ನಿರಂತರ ಸಾಹಿತ್ಯ ರಚನೆಯ ಮೂಲಕ ತೋರಿಸಿಕೊಟ್ಟಿದ್ದಾರೆ.
ಲೇಖಕರು ಕಥೆಯಲ್ಲಿ ಬರುವ ಪಾತ್ರಗಳನ್ನು ಅತಿ ಸಮೀಪದಿಂದ ನೋಡಿದ್ದಲ್ಲದೆ, ಆ ಪಾತ್ರಗಳು ಜೀವಂತ ಇವೆಯೋ ಎಂಬಂತೆ ಚಿತ್ರಿಸಿದ್ದಲ್ಲದೆ ಆ ಪಾತ್ರಗಳ ಸಂವಹನ ಕ್ರಿಯೆಯನ್ನ ಅಭಿವ್ಯಕ್ತಗೊಳಸಿದ್ದಾರೆ. ಲೇಖಕರ ದೂರದೃಷ್ಠಿ, ಪಾತ್ರಗಳ ಜೊತೆ ನಡೆಸುವ ಅವರ ಸಂಭಾಷಣೆಯ ಪರಿ ಸೂಜಿಗವೆನಿಸಿದರೂ ಕಥೆಯಲ್ಲಿ ಎಲ್ಲಿಯೂ ಯಾವೊಬ್ಬವ್ಯಕ್ತಿ ಸ್ವಾತಂತ್ರೃಕ್ಕೂ ನೋವಾಗದಂತೆ ಕಥೆಗಳಿಗೆ ಸಾಣೆಹಿಡಿದಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.
ಹಿರಿಯರಾದ ಬಸವರಾಜ ಶಾಸ್ತ್ರಿಗಳು ತಮ್ಮದೇ ಧಾಟಿಯಲ್ಲಿ ಈ ಇಳಿ ವಯಸ್ಸಿನಲ್ಲಿ ಹಲವು ಲೇಖನ, ಕಥೆ, ಕವನ ಸಂಕಲನಗಳನ್ನು ಪ್ರಕಟಿಸಿ ಸಾಹಿತ್ಯ ಸೇವೆಗೆ ಕಂಕಣಬದ್ಧರಾಗಿ ನಿಂತಿರುವುದು ಸಂತೋಷಕರ ಸಂಗತಿ. ಅವರ ಚಿಂತನಾ ಲಹರಿ ಇನ್ನೂ ಗಂಗೆಯಂತೆ ಹರಿಯಲಿ ಎಂದು ಆಶಿಸುತ್ತಾ ಗುರು ಹಿರಿಯ ಪಾದಕ್ಕೆ ಶರಣೆನ್ನುವೆ.