Posts

ಯುಗಾದಿ ಮತ್ತೆ ಬರಲಿ…

ಯುಗಾದಿ ನಿಮಿತ್ತ ಬರೆದ ನನ್ನ ಕವಿತೆ… ..ಮಹೇಶ ಕಲಾಲ ಯಾದಗಿರಿ ಯುಗಾದಿ   ಮತ್ತೆ   ಬರಲಿ ಭರವಸೆ   ಬೆಳಕು   ತರಲಿ ಬೇವು ಬೆಲ್ಲವ ಬೆರಸಿ ಪ್ರೀತಿ ಸ್ನೇಹ ಅರಸಿ ಬರುವ ನವ ಜೋಡಿಗಳ ಬಾಳಲಿ ಬೆಳಕು ತರಲಿ ಮತ್ತೆ ಯುಗಾದಿ ಬರಲಿ ಭರವಸೆ ಬೆಳಕು ತರಲಿ ಬರವ ನೀಗಲಿ ಬದುಕ ಸಾಗಲಿ ಜನ ಜಾನುವಾರು ಪ್ರಾಣ ಉಳಿಯಲಿ ಕಾಯಕ ಯೋಗಿ ಕೈಯ ಹಿಡಿಯಲಿ ಅನ್ನದಾತನುಜಂಗೆ ಅಕ್ಷರ ಸಿಗಲಿ ಗನ್ನು ಹಿಡಿವ ಕೈ ಪೆನ್ನು ಹಿಡಿಯಲಿ ಅಕ್ಷರ ಕ್ರಾಂತಿಗೆ ಮುನ್ನುಡಿಯಾಗಲಿ ಅಂತ್ಯಜರ ನೋವ ಕರಗಿಸುವ ಭಾವ ಹುಟ್ಟಿ ಬರಲಿ ಶಿವ ಭರವಸೆ ಬೆಳಕು ತರಲಿ ಮತ್ತೆ ಯುಗಾದಿ ಬರಲಿ ಉದ್ಯೋಗವ ಅರಸಿ ಮಹಾನಗರವ ಸೋಸಿ ಸೋತು ಬರುವ ನೋವ ತರುವ ಎದೆವ ನೋವ ಮರೆವ ಮರೆತಂತೆ ತರುವ ಭಾವ ಉದ್ಯೋಗ ಅರಸಿ ಬರುವ ಯುವಕರಲ್ಲಿ ನವ ಚೈತನ್ಯ ಬರಲಿ ಸರ್ವರಿಗೆ ಉದ್ಯೋಗ ಸಿಗಲಿ ನಿರುದ್ಯೋಗ ನಿವಾರಿಸಲಿ ಭರವಸೆ ಬೆಳಕು ತರಲಿ ಮತ್ತೆ ಯುಗಾದಿ ಬರಲಿ ಅನ್ನದ ಆಹಾಕಾರ ಅಂತ್ಯ ಕಾಣಲಿ ಹೆಣ್ಣಿನ   ಶೋಷಣೆಗೆ ಮುಕ್ತಿ ಸಿಗಲಿ ಅಂಧರ ಬಾಳಲಿ ಬೆಳಕು ತರಲಿ ಸುಂದರ ನಾಳೆ ಮತ್ತೆ ಬರಲಿ ಮತ್ತೆ ಯುಗಾದಿ ಬರಲಿ ಭರವಸೆ ಬೆಳಕು ತರಲಿ
Image
Image

ಸಂಕಲ್ಪದ ಸಂಕೋಲೆ

ನನ್ನ ಮೊದಲ ಕಥೆ ಸಂಕಲ್ಪದ ಸಂಕೋಲೆ - ಮಹೇಶ ಕಲಾಲ ಯಾದಗಿರಿ ಹಳದಿ ದೀಪ ಮಿನುಗುತ್ತಿದ್ದಂತೆ ರಘು ಕಿಟಾರನೆ ಕಿರುಚಿದ. ಹೊರ ಬಾಗಿಲ ಬಳಿ ಕುಳಿತಿದ್ದ ರಂಗಮ್ಮ ಮಗನಿಗೆ ಏನಾಯ್ತು ಎಂದು ಓಡೋಡಿ ಮನೆ ಯ ಒಳಗೆ ಬಂದಳು. ಮಗ ಮೂಲೆಯಲ್ಲಿ ಒಬ್ಬನೆ ಏನೇನೋ ಎಣಿಸುತ್ತಿರುವಂತೆ ತಾನೋಬ್ಬನೆ ತನ್ನ ಬೆರಳನ್ನು ಹಿಂದೆ ಮುಂದೆ ಮಾಡುತ್ತಿರುವದನ್ನು ನೋಡಿ ರಂಗಮ್ಮನ ಮಾತೃ ಹೃದಯ ಕಿವಿಚಿದಂತಾಗಿ ಹಾಗೆ ನೆಲಕ್ಕುರುಳುವಂತೆ ಕುಳಿತುಬಿಟ್ಟಳು. ಕೆಲವು ವರ್ಷಗಳಿಂದ ನಡೆದು ಬಂದ ಸಂಪ್ರದಾಯದಂತೆ ದಿನಾ ಸಂಜೆ ಕರೆಂಟ್ ಬರುವದು ರಘು ಹೀಗೆ ಚೀರುವುದು ರಂಗಮ್ಮನಿಗೆ ರೂಢಿಯಾಗಿದ್ದರು. ದಿನಾ ಹೊಸದರಂತೆ ಭಯಪಡುತ್ತಿದ್ದಳು. ಅವಳ ಭಯಕ್ಕಿಲ್ಲದ ಅಂತ್ಯಕ್ಕೆ ತತ್ತರಿಸಿದ ಆ ಜೀವ ಶೀವನೆ ಯಾಕಾದರೂ ನನ್ನ ಈ ರೀತಿ ಬದುಕಿಸಿದ್ದಿಯಾ ಎಂದು ಶೀವನಲ್ಲಿ ಕರುಣಾಭಾವದಿಂದ ಕೈಮುಗಿದು ಕುಳಿತಿದ್ದಳು. ರಘು ರಘು ಬಾ ಮಗ ಎಲ್ಲಿದ್ದಿಯಾ ನಿನ್ನೆ ನಿಮ್ಮಪ್ಪ ಕೊಟ್ಟ ದುಡ್ನ ಕಳುವು ಮಾಡಿದೇನಾ ಪಲ್ಯಾ ತರಲಿಕ್ಕೆ ಬೇಕೋ ಅದು ಎಂದು ಒಂದೇ ಉಸಿರಿನಲ್ಲಿ ರಂಗಮ್ಮ ತನ್ನ ಮಗನಿಗೆ ಕರೆಯುತ್ತಿದ್ದಳು. ಇಗಾ ಅದು ಎಲ್ಯಾದ ಅಂತ ಹೇಳ ಇಲ್ಲಂದ್ರ ನೀನಗ ಸಾಲಿಗೆ ಕಳಸಲಿಕ್ಕಾ ಡಬ್ಬಿ ತುಂಬಂಗಿಲ್ಲ ನೋಡ. ಉಪಾಸ ಇರಬೇಕಾಗತದ. ಎಂದು ಒಂದೇ ಸಮನೆ ತಾಯಿ ಮನೆಯ ಒಳಗಿಂದ ಕರೆಯುತ್ತಿದ್ದ್ರು. ರಘು ತಾ ಕುಳಿತಲ್ಲಿಂದ ಮೇಲೆಳಲೇ ಇಲ್ಲ. ಅವ ತನ್ನ ಆಟದಲ್ಲೆ ಮಗ್ನನಾಗಿದ್ದ. ಹೊರಗಡೆಯಿಂದ ಬಂದ ರಂಗಪ್ಪ ಏ ರಘ್ಯಾ ನಿಮ್ಮವ್...
Image
Image
Image
Image

ಸರ್ಕಾರಿ ಪ್ರಯೋಗ ಶಾಲೆಗೆ ಶೈಕ್ಷಣಿಕ ವ್ಯವಸ್ಥೆ ಬಲಿ

Image
 - ಮಹೇಶ ಕಲಾಲ ಜಗತ್ತು ಶರವೇಗದಲ್ಲಿ ಸ್ಪರ್ಧೆಯಲ್ಲಿದೆ. ಜಗತ್ತಿನ ಪ್ರತಿಯೊಂದು ದೇಶಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಗೈಯಲು ಶಿಕ್ಷಣ ಕ್ಷೇತ್ರದಲ್ಲಿ ಹಲವು ಬದಲಾವಣೆಗಳನ್ನು ತಂದು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೆ ಮಾಡುತ್ತಿವೆ. ಅವುಗಳಿಗೆ ಸ್ಪಷ್ಟ ಉದಾಹರಣೆ ಜಪಾನ್, ಚೀನಾ, ಅಮೇರಿಕಾ ಸೇರಿದಂತೆ ಹಲವು ರಾಷ್ಟ್ರಗಳ ಅಭಿವೃದ್ಧಿಯನ್ನ ಗಮನಿಸಬಹುದು. ಹಲವು ರಾಷ್ಟ್ರಗಳು ಈಗ ಆನ್‍ಲೈನ್ ಶಿಕ್ಷಣದಲ್ಲಿ ಸಾಕಷ್ಟು ಸುದಾರಣೆ ತಂದುಕೊಂಡುದ್ದಲ್ಲದೆ. ರಾಕೆಟ್ ವೇಗದಲ್ಲಿ ಇಂಟರನೆಟ್ ವ್ಯವಸ್ಥೆಯನ್ನ ಅಳವಡಿಸಿಕೊಂಡು ಶಿಕ್ಷಣ ಕಲಿಯುವಿಕೆಯನ್ನ ಶಾಲೆ ಎಂಬ ಪ್ರಪಂಚದಿಂದ ಹೊರತಂದಿವೆ. ಆದರೆ ಭಾರತ ಮಾತ್ರ ಇನ್ನು ಆ ವ್ಯವಸ್ಥೆಯಿಂದ ಹೊರಬರಲು ಹಲವು ದಶಕಗಳೇ ಬೇಕಾಗಬಹುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ ಇಲ್ಲಿ ಇನ್ನು ಹಲವು ಶಾಲೆಗಳಿಗೆ ಮೂಲ ಸೌಕರ್ಯವೇ ಸಿಕ್ಕಿಲ್ಲ ಅಂತಹುದರಲ್ಲಿ ಇಂಟರ್‍ನೆಟ್ ಅಳವಡಿಸುವಿಕೆ ದೂರದ ಮಾತಾಗಿದೆ. ಭಾರತದ ಶಿಕ್ಷಣ ವ್ಯವಸ್ಥೆ ಇನ್ನು ಶಾಲೆ ಎಂಬ ಬಾವಿಯನ್ನ ನಿರ್ಮಿಸಿಕೊಂಡು ಅದೇ ದೊಡ್ಡ ಪ್ರಪಂಚವೆನ್ನುವಂತೆ ಅದಕ್ಕೆ ಮೂಲಸೌಕರ್ಯ ಕಲ್ಪಿಸಲು ಒದ್ದಾಡುತ್ತಿದೆ. ಆದರೆ ಜಗತ್ತಿನ ಹಲವು ದೇಶಗಳು ತಮ್ಮ ಮಕ್ಕಳಿಗೆ ಮನೆಯಲ್ಲೆ ಕುಳಿತು ಶಿಕ್ಷಣ ಕಲಿಯುವಿಕೆಯೊಂದಿಗೆ ಜಗತ್ತಿನ ವೇಗಕ್ಕೆ ಮಕ್ಕಳ ಬುದ್ದಿ ಶಕ್ತಿ ಮತ್ತು ಕೌಶಲವನ್ನು ವೃದ್ಧಿಸಿಕೊಳ್ಳಲು ವ್ಯವಸ್ಥೆ ಕಲ್ಪಿಸುತ್ತಿವೆ ಈಗ...

ಮೌಢ್ಯತೆಯ ಪೆÇರೆ ಕಳಚಲು ಲೇಖನಿ ಹಿಡಿದ ಶಾಸ್ತ್ರಿಗಳು

ಮೌಢ್ಯತೆಯ ಪೆÇರೆ ಕಳಚಲು ಲೇಖನಿ ಹಿಡಿದ ಶಾಸ್ತ್ರಿಗಳು  - ಮಹೇಶ ಕಲಾಲ್ ಮೌಢ್ಯತೆಯ ಪೆÇರೆ ಕಳಚಿ ಸಾಹಿತ್ಯ ಗಂಗೆಯ ಹರಿಸಲು ಜನರನ್ನು ಪ್ರೇರೆಪಿಸಲೆಂಬಂತೆ ತಮ್ಮ ಮನೆಯ ಕಾರ್ಯವನ್ನು ಸಾರ್ವಜನಿಕವಾಗಿಸಿ ಆ ಸಮಯವನ್ನು  ಸಾಹಿತ್ಯ, ಚರ್ಚಾ ಕೂಟಗಳಿಗೆ ಸದ್ವಿನಿಯೋಗಿಸುತ್ತಿರುವ ಹಿರಿಯ ಸಾಹಿತಿ ಬಸವರಾಜ ಶಾಸ್ತ್ರಿಯವರ ಸೇವಾಕಾರ್ಯ ಶ್ಲಾಘನೀಯವಾದದ್ದು. ಕಸವು ರಸವಾಗಲಿ, ಧ್ಯೇಯೋz್ದÉೀಶಗಳು ಅದ್ವಿತೀಯ ಬೀಜಾಕ್ಷರಗಳಾಗಲಿ ಎಂಬ ದೃಷ್ಠಿಯಿಂದ ಪ್ರತಿಯೊಂದು ಕಾರ್ಯಕ್ಕೂ ಸಾಹಿತ್ಯ ಸೇವೆಯ ಅನುಪಮ ಅವಕಾಶವನ್ನು ಒದಗಿಸಿ, ಸಾಹಿತ್ಯ ಸೃಷ್ಠಿಯ ಜೊತೆಗೆ ವಾಗ್ದೇವಿಯ ವರಪುತ್ರರಿಗೆ ಆಹ್ವಾನವಿಯುತ್ತ ಇಳಿ ವಯಸ್ಸಿನಲ್ಲಯೂ ಕ್ರಿಯಾಶೀಲ ವ್ಯಕ್ತಿತ್ವದಿಂದ ಸದಾ ತಾ ಮುಂದು ಎನ್ನುವು ಘೋಷಾ ವಾಕ್ಯದೊಂದಿಗೆ ಹಗಲಿರುಳೂ ಸೇವಾಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಅವರ ಅದಲು-ಬದಲು ಕಥಾ ಸಂಕಲನ ಸತ್ಯದ ದಾರಿ ಹುಡುಕ ಹೊರಟ ಹರಿಶ್ಚಂದ್ರನ ಪಾಡಿನಂತಿದೆ. ಮಹಿಳೆಯನ್ನು ಇಳೆಯಷ್ಟು ಕ್ಷಮಾಗುಣ ಸಂಪನ್ನಳು ಎಂಬಂತೆ ಬಸವರಾಜ ಶಾಸ್ತ್ರಿಯವರು ಇಲ್ಲಿ ಚಿತ್ರಿಸಿದ್ದಾರೆ. ತಮ್ಮ ಹಲವು ಕಥೆಗಳಲ್ಲಿ ಸ್ತ್ರೀ ಪ್ರಾಧ್ಯಾನ್ಯತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಪುರುಷ ಪಾತ್ರಗಳ ಪ್ರಭಾವವಿದ್ದರೂ ಅಲ್ಲಿಯೂ ಮಹಿಳೆಯೇ ಕಥಾವಸ್ತುವನ್ನು ಪ್ರತಿನಿಧಿಸುತ್ತಾಳೆ. ಅವರ ಮಗ್ಗಲಿಗೆ ಬೇಕು ಮನೆಗೆ ಬೇಡ, ತ್ಯಾಗ, ವಾತ್ಸಲ್ಯ, ಅದಲು -ಬದಲು...

ಕಣ್ಣೀರ ಕಡಲಲಿ ಕೃಷಿಕನ ತವರು

ಕಣ್ಣೀರ ಕಡಲಲಿ ಕೃಷಿಕನ ತವರು ನೇಗಿಲಯೋಗಿಯ ನೋಡಲ್ಲಿ  ಬಿತ್ತಿದ ಬೆಳೆಗೆ ಬೆಂಕಿಯ ಹಚ್ಚಿ ಅದರಲಿ ಹಾರಿ ಪ್ರಾಣವ ಬಿಟ್ಟನು ಹತ್ತಿ, ಕಬ್ಬು ಬೆಳೆಯಲು ಅವನು ಲಕ್ಷ ಸಾಲವ ಮಾಡಿಹನು ಫೈರಿಗೆ ಹಚ್ಚಿದ ಬೆಂಕಿಯಲಿ ಬೆಂದು ಭಸ್ಮವಾಗಿಹನು ಸಾಲವ ಕೊಟ್ಟರು ಶೂಲವ ಕೊಟ್ಟರು ಕೃಷಿಕನ ಬಾಳಿಗೆ ಬೆಂಕಿಯನಿಟ್ಟರು ಕಣ್ಣೀರ ಕಡಲಲಿ ಕೃಷಿಕನ ತವರು ಭಾಗ್ಯದ ಬೆನ್ನತ್ತಿರುವ ಸರ್ಕಾರಗಳು ರೈತನ ಜೋಳಿಗೆ ಖಾಲಿಯಿಟ್ಟು  ಹಂಗಿನ ಅರಮನೆ ಸೃಷ್ಠಿಸುತಿಹರು ಪರಿಹಾರ ನೆಪದಿ ಭೇಟಿಯನ್ನಿತ್ತರು ಮೊಸಳೆ ಕಣ್ಣೀರು ಸುರಿಸುತಿಹರು ಪುಡಿಗಾಸು ನೀಡಿ ಪೆÇೀಸು ಕೊಟ್ಟು ಪತ್ರಿಕೆಗಳಲಿ ರಾರಾಜಿಸುತಿಹರು ಅನ್ನವ ಬೆಳೆವ ಅನ್ನದಾತನು ಹಸಿವು ತಾಳದೆ ಆತ್ಮಹತ್ಯೆ ಹಾದಿ ಹಿಡಿದನು ... ಸಾಲದ ಋಣವು ಶೂಲವಾಗಿ ಬಾಳನು ನುಂಗಿತು ಮುಂದೆ ಸಾಗಿ   - ಮೌನಯೋಗಿ (ನನ್ನ ಮಾನಸ ಗುರು ಕವಿ ಕುವೆಂಪುರವರ ಕ್ಷಮೆ ಕೋರುತ್ತಾ)   

ಮೌನಯೋಗಿ:

ಮೌನಯೋಗಿ:
Image

ಮೌನಯೋಗಿ:

ಮೌನಯೋಗಿ:
Image
Image
Image
Image

ಆತ್ಮವಿಶ್ವಾಸಕ್ಕೊಂದು ಪುಸ್ತಕ ಹಿಡಿಯಿರಿ....

ಆತ್ಮವಿಶ್ವಾಸಕ್ಕೊಂದು ಪುಸ್ತಕ ಹಿಡಿಯಿರಿ.... * ನನಗೊಂದು ಅಭ್ಯಾಸವಿದೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಗೊತ್ತಿಲ್ಲ. ಈ ಅಭ್ಯಾಸ ನನಗೆ ಪಿಯುಸಿಯಿಂದ ಅಂದರೆ 1996ರಿಂದ ಪ್ರಾರಂಭವಾಗಿದೆ. ಸದಾ ಯಾವಾಗಲೂ ಕೈಯಲ್ಲೊಂದು ಪುಸ್ತಕ ಹಿಡಿದಿರುವುದು. ಅದು ದಿನಕ್ಕೊಂದು ಹೊಸದಾಗಿದ್ದರೆ ನನ್ನಲ್ಲಿ ಇನ್ನು ಹೆಚ್ಚಿನ ಚೈತನ್ಯ ಇರುತ್ತದೆ ಎಂದು ಭಾವಿಸಿರುವವನು ನಾನು. ನನ್ನ ಕೆಲವು ಗೆಳೆಯರು ಹೇಳುತ್ತಾರೆ ಅಲ್ಲೋ ದಿನಾಲೂ ಯಾವಗಲೂ ಪುಸ್ತಕ ಕೈಯಲ್ಲಿ ಹಿಡಿದಿರುತ್ತಿಯಲ್ಲ ಅದು ಕೊಳಕಾಗಿ ಹಾಳಾಗುವುದಿಲ್ಲವೇ ಎಂದು ಪ್ರಶ್ನಿಸುತ್ತಾರೆ. ನದಿಯ ಮಧ್ಯೆಯಲ್ಲಿರುವ ಕಲ್ಲು ನೀರಿನ ಹರಿವಿನ ಸೆಳೆತಕ್ಕೆ ಶಿಲೆಯಂತಾಗುವುದಿಲ್ಲವೇ. ಅದು ಪಾಚಿಗಟ್ಟಿದ ಮಾತ್ರಕ್ಕೆ ಕೊಳಕಾಗುವುದೇ. ಸ್ವಚ್ಛ ಮತ್ತು ಸುಂದರವಾಗಿ ನಿರ್ಮಿಸಬೇಕಿರುವುದು ವ್ಯಕ್ತಿತ್ವವೇ ಹೊರತು ಪುಸ್ತಕವಲ್ಲ. ಪುಸ್ತಕ ಕೊಳಕಾಗುತ್ತದೆ (ಹಾಳಾಗದೆ) ಅಂತ ಅದನ್ನು ಹಾಗೆ ಇಟ್ಟಲ್ಲಿ ಅದರಲ್ಲಿನ ಸಂದೇಶವನ್ನು ಅರಿತುಕೊಳ್ಳುವುದು ಹೇಗೆ. ಪುಸ್ತಕ ಮನನವಾಗಬೇಕಿದ್ದಲ್ಲಿ ಅದನ್ನು ನಾವು ಉಪಯೋಗಿಸಲೇಬೇಕು. ಉಪಯೋಗಿಸಬೇಕೆಂದರೆ ಅದು ನಮ್ಮ ಬಳಿಯಲ್ಲಿರಬೇಕಲ್ಲವೇ. ಇಂದಿನ ಒತ್ತಡದ ಜೀವನದಲ್ಲಿ ಓದುವುದಕ್ಕಾಗಿಯೇ ಸಮಯ ನಿಗದಿ ಮಾಡಲು ಸಾಧ್ಯವೇ. ಓದುವುದು ನಮ್ಮ ಹವ್ಯಾಸವಾಗಬೇಕೇ ವಿನಹಃ ಅದು ಕರ್ತವ್ಯವಾಗಬಾರದು. ಹಾಗಾಗಿ ಪುಸ್ತಕ ನಮ್ಮ ಬಳಿ ಇರಬೇಕು ಅಂದ ಮೇಲೆ ಅದು ಕೊಳಕಾಗದೆ (ಹಾಳಾಗದೆ)ಇರಲು ಸ...