- Get link
- X
- Other Apps
Posts
ಸರ್ಕಾರಿ ಪ್ರಯೋಗ ಶಾಲೆಗೆ ಶೈಕ್ಷಣಿಕ ವ್ಯವಸ್ಥೆ ಬಲಿ
- Get link
- X
- Other Apps
- ಮಹೇಶ ಕಲಾಲ ಜಗತ್ತು ಶರವೇಗದಲ್ಲಿ ಸ್ಪರ್ಧೆಯಲ್ಲಿದೆ. ಜಗತ್ತಿನ ಪ್ರತಿಯೊಂದು ದೇಶಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಗೈಯಲು ಶಿಕ್ಷಣ ಕ್ಷೇತ್ರದಲ್ಲಿ ಹಲವು ಬದಲಾವಣೆಗಳನ್ನು ತಂದು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೆ ಮಾಡುತ್ತಿವೆ. ಅವುಗಳಿಗೆ ಸ್ಪಷ್ಟ ಉದಾಹರಣೆ ಜಪಾನ್, ಚೀನಾ, ಅಮೇರಿಕಾ ಸೇರಿದಂತೆ ಹಲವು ರಾಷ್ಟ್ರಗಳ ಅಭಿವೃದ್ಧಿಯನ್ನ ಗಮನಿಸಬಹುದು. ಹಲವು ರಾಷ್ಟ್ರಗಳು ಈಗ ಆನ್ಲೈನ್ ಶಿಕ್ಷಣದಲ್ಲಿ ಸಾಕಷ್ಟು ಸುದಾರಣೆ ತಂದುಕೊಂಡುದ್ದಲ್ಲದೆ. ರಾಕೆಟ್ ವೇಗದಲ್ಲಿ ಇಂಟರನೆಟ್ ವ್ಯವಸ್ಥೆಯನ್ನ ಅಳವಡಿಸಿಕೊಂಡು ಶಿಕ್ಷಣ ಕಲಿಯುವಿಕೆಯನ್ನ ಶಾಲೆ ಎಂಬ ಪ್ರಪಂಚದಿಂದ ಹೊರತಂದಿವೆ. ಆದರೆ ಭಾರತ ಮಾತ್ರ ಇನ್ನು ಆ ವ್ಯವಸ್ಥೆಯಿಂದ ಹೊರಬರಲು ಹಲವು ದಶಕಗಳೇ ಬೇಕಾಗಬಹುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ ಇಲ್ಲಿ ಇನ್ನು ಹಲವು ಶಾಲೆಗಳಿಗೆ ಮೂಲ ಸೌಕರ್ಯವೇ ಸಿಕ್ಕಿಲ್ಲ ಅಂತಹುದರಲ್ಲಿ ಇಂಟರ್ನೆಟ್ ಅಳವಡಿಸುವಿಕೆ ದೂರದ ಮಾತಾಗಿದೆ. ಭಾರತದ ಶಿಕ್ಷಣ ವ್ಯವಸ್ಥೆ ಇನ್ನು ಶಾಲೆ ಎಂಬ ಬಾವಿಯನ್ನ ನಿರ್ಮಿಸಿಕೊಂಡು ಅದೇ ದೊಡ್ಡ ಪ್ರಪಂಚವೆನ್ನುವಂತೆ ಅದಕ್ಕೆ ಮೂಲಸೌಕರ್ಯ ಕಲ್ಪಿಸಲು ಒದ್ದಾಡುತ್ತಿದೆ. ಆದರೆ ಜಗತ್ತಿನ ಹಲವು ದೇಶಗಳು ತಮ್ಮ ಮಕ್ಕಳಿಗೆ ಮನೆಯಲ್ಲೆ ಕುಳಿತು ಶಿಕ್ಷಣ ಕಲಿಯುವಿಕೆಯೊಂದಿಗೆ ಜಗತ್ತಿನ ವೇಗಕ್ಕೆ ಮಕ್ಕಳ ಬುದ್ದಿ ಶಕ್ತಿ ಮತ್ತು ಕೌಶಲವನ್ನು ವೃದ್ಧಿಸಿಕೊಳ್ಳಲು ವ್ಯವಸ್ಥೆ ಕಲ್ಪಿಸುತ್ತಿವೆ ಈಗ...
ಮೌಢ್ಯತೆಯ ಪೆÇರೆ ಕಳಚಲು ಲೇಖನಿ ಹಿಡಿದ ಶಾಸ್ತ್ರಿಗಳು
- Get link
- X
- Other Apps
ಮೌಢ್ಯತೆಯ ಪೆÇರೆ ಕಳಚಲು ಲೇಖನಿ ಹಿಡಿದ ಶಾಸ್ತ್ರಿಗಳು - ಮಹೇಶ ಕಲಾಲ್ ಮೌಢ್ಯತೆಯ ಪೆÇರೆ ಕಳಚಿ ಸಾಹಿತ್ಯ ಗಂಗೆಯ ಹರಿಸಲು ಜನರನ್ನು ಪ್ರೇರೆಪಿಸಲೆಂಬಂತೆ ತಮ್ಮ ಮನೆಯ ಕಾರ್ಯವನ್ನು ಸಾರ್ವಜನಿಕವಾಗಿಸಿ ಆ ಸಮಯವನ್ನು ಸಾಹಿತ್ಯ, ಚರ್ಚಾ ಕೂಟಗಳಿಗೆ ಸದ್ವಿನಿಯೋಗಿಸುತ್ತಿರುವ ಹಿರಿಯ ಸಾಹಿತಿ ಬಸವರಾಜ ಶಾಸ್ತ್ರಿಯವರ ಸೇವಾಕಾರ್ಯ ಶ್ಲಾಘನೀಯವಾದದ್ದು. ಕಸವು ರಸವಾಗಲಿ, ಧ್ಯೇಯೋz್ದÉೀಶಗಳು ಅದ್ವಿತೀಯ ಬೀಜಾಕ್ಷರಗಳಾಗಲಿ ಎಂಬ ದೃಷ್ಠಿಯಿಂದ ಪ್ರತಿಯೊಂದು ಕಾರ್ಯಕ್ಕೂ ಸಾಹಿತ್ಯ ಸೇವೆಯ ಅನುಪಮ ಅವಕಾಶವನ್ನು ಒದಗಿಸಿ, ಸಾಹಿತ್ಯ ಸೃಷ್ಠಿಯ ಜೊತೆಗೆ ವಾಗ್ದೇವಿಯ ವರಪುತ್ರರಿಗೆ ಆಹ್ವಾನವಿಯುತ್ತ ಇಳಿ ವಯಸ್ಸಿನಲ್ಲಯೂ ಕ್ರಿಯಾಶೀಲ ವ್ಯಕ್ತಿತ್ವದಿಂದ ಸದಾ ತಾ ಮುಂದು ಎನ್ನುವು ಘೋಷಾ ವಾಕ್ಯದೊಂದಿಗೆ ಹಗಲಿರುಳೂ ಸೇವಾಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಅವರ ಅದಲು-ಬದಲು ಕಥಾ ಸಂಕಲನ ಸತ್ಯದ ದಾರಿ ಹುಡುಕ ಹೊರಟ ಹರಿಶ್ಚಂದ್ರನ ಪಾಡಿನಂತಿದೆ. ಮಹಿಳೆಯನ್ನು ಇಳೆಯಷ್ಟು ಕ್ಷಮಾಗುಣ ಸಂಪನ್ನಳು ಎಂಬಂತೆ ಬಸವರಾಜ ಶಾಸ್ತ್ರಿಯವರು ಇಲ್ಲಿ ಚಿತ್ರಿಸಿದ್ದಾರೆ. ತಮ್ಮ ಹಲವು ಕಥೆಗಳಲ್ಲಿ ಸ್ತ್ರೀ ಪ್ರಾಧ್ಯಾನ್ಯತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಪುರುಷ ಪಾತ್ರಗಳ ಪ್ರಭಾವವಿದ್ದರೂ ಅಲ್ಲಿಯೂ ಮಹಿಳೆಯೇ ಕಥಾವಸ್ತುವನ್ನು ಪ್ರತಿನಿಧಿಸುತ್ತಾಳೆ. ಅವರ ಮಗ್ಗಲಿಗೆ ಬೇಕು ಮನೆಗೆ ಬೇಡ, ತ್ಯಾಗ, ವಾತ್ಸಲ್ಯ, ಅದಲು -ಬದಲು...
ಕಣ್ಣೀರ ಕಡಲಲಿ ಕೃಷಿಕನ ತವರು
- Get link
- X
- Other Apps
ಕಣ್ಣೀರ ಕಡಲಲಿ ಕೃಷಿಕನ ತವರು ನೇಗಿಲಯೋಗಿಯ ನೋಡಲ್ಲಿ ಬಿತ್ತಿದ ಬೆಳೆಗೆ ಬೆಂಕಿಯ ಹಚ್ಚಿ ಅದರಲಿ ಹಾರಿ ಪ್ರಾಣವ ಬಿಟ್ಟನು ಹತ್ತಿ, ಕಬ್ಬು ಬೆಳೆಯಲು ಅವನು ಲಕ್ಷ ಸಾಲವ ಮಾಡಿಹನು ಫೈರಿಗೆ ಹಚ್ಚಿದ ಬೆಂಕಿಯಲಿ ಬೆಂದು ಭಸ್ಮವಾಗಿಹನು ಸಾಲವ ಕೊಟ್ಟರು ಶೂಲವ ಕೊಟ್ಟರು ಕೃಷಿಕನ ಬಾಳಿಗೆ ಬೆಂಕಿಯನಿಟ್ಟರು ಕಣ್ಣೀರ ಕಡಲಲಿ ಕೃಷಿಕನ ತವರು ಭಾಗ್ಯದ ಬೆನ್ನತ್ತಿರುವ ಸರ್ಕಾರಗಳು ರೈತನ ಜೋಳಿಗೆ ಖಾಲಿಯಿಟ್ಟು ಹಂಗಿನ ಅರಮನೆ ಸೃಷ್ಠಿಸುತಿಹರು ಪರಿಹಾರ ನೆಪದಿ ಭೇಟಿಯನ್ನಿತ್ತರು ಮೊಸಳೆ ಕಣ್ಣೀರು ಸುರಿಸುತಿಹರು ಪುಡಿಗಾಸು ನೀಡಿ ಪೆÇೀಸು ಕೊಟ್ಟು ಪತ್ರಿಕೆಗಳಲಿ ರಾರಾಜಿಸುತಿಹರು ಅನ್ನವ ಬೆಳೆವ ಅನ್ನದಾತನು ಹಸಿವು ತಾಳದೆ ಆತ್ಮಹತ್ಯೆ ಹಾದಿ ಹಿಡಿದನು ... ಸಾಲದ ಋಣವು ಶೂಲವಾಗಿ ಬಾಳನು ನುಂಗಿತು ಮುಂದೆ ಸಾಗಿ - ಮೌನಯೋಗಿ (ನನ್ನ ಮಾನಸ ಗುರು ಕವಿ ಕುವೆಂಪುರವರ ಕ್ಷಮೆ ಕೋರುತ್ತಾ)
ಆತ್ಮವಿಶ್ವಾಸಕ್ಕೊಂದು ಪುಸ್ತಕ ಹಿಡಿಯಿರಿ....
- Get link
- X
- Other Apps
ಆತ್ಮವಿಶ್ವಾಸಕ್ಕೊಂದು ಪುಸ್ತಕ ಹಿಡಿಯಿರಿ.... * ನನಗೊಂದು ಅಭ್ಯಾಸವಿದೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಗೊತ್ತಿಲ್ಲ. ಈ ಅಭ್ಯಾಸ ನನಗೆ ಪಿಯುಸಿಯಿಂದ ಅಂದರೆ 1996ರಿಂದ ಪ್ರಾರಂಭವಾಗಿದೆ. ಸದಾ ಯಾವಾಗಲೂ ಕೈಯಲ್ಲೊಂದು ಪುಸ್ತಕ ಹಿಡಿದಿರುವುದು. ಅದು ದಿನಕ್ಕೊಂದು ಹೊಸದಾಗಿದ್ದರೆ ನನ್ನಲ್ಲಿ ಇನ್ನು ಹೆಚ್ಚಿನ ಚೈತನ್ಯ ಇರುತ್ತದೆ ಎಂದು ಭಾವಿಸಿರುವವನು ನಾನು. ನನ್ನ ಕೆಲವು ಗೆಳೆಯರು ಹೇಳುತ್ತಾರೆ ಅಲ್ಲೋ ದಿನಾಲೂ ಯಾವಗಲೂ ಪುಸ್ತಕ ಕೈಯಲ್ಲಿ ಹಿಡಿದಿರುತ್ತಿಯಲ್ಲ ಅದು ಕೊಳಕಾಗಿ ಹಾಳಾಗುವುದಿಲ್ಲವೇ ಎಂದು ಪ್ರಶ್ನಿಸುತ್ತಾರೆ. ನದಿಯ ಮಧ್ಯೆಯಲ್ಲಿರುವ ಕಲ್ಲು ನೀರಿನ ಹರಿವಿನ ಸೆಳೆತಕ್ಕೆ ಶಿಲೆಯಂತಾಗುವುದಿಲ್ಲವೇ. ಅದು ಪಾಚಿಗಟ್ಟಿದ ಮಾತ್ರಕ್ಕೆ ಕೊಳಕಾಗುವುದೇ. ಸ್ವಚ್ಛ ಮತ್ತು ಸುಂದರವಾಗಿ ನಿರ್ಮಿಸಬೇಕಿರುವುದು ವ್ಯಕ್ತಿತ್ವವೇ ಹೊರತು ಪುಸ್ತಕವಲ್ಲ. ಪುಸ್ತಕ ಕೊಳಕಾಗುತ್ತದೆ (ಹಾಳಾಗದೆ) ಅಂತ ಅದನ್ನು ಹಾಗೆ ಇಟ್ಟಲ್ಲಿ ಅದರಲ್ಲಿನ ಸಂದೇಶವನ್ನು ಅರಿತುಕೊಳ್ಳುವುದು ಹೇಗೆ. ಪುಸ್ತಕ ಮನನವಾಗಬೇಕಿದ್ದಲ್ಲಿ ಅದನ್ನು ನಾವು ಉಪಯೋಗಿಸಲೇಬೇಕು. ಉಪಯೋಗಿಸಬೇಕೆಂದರೆ ಅದು ನಮ್ಮ ಬಳಿಯಲ್ಲಿರಬೇಕಲ್ಲವೇ. ಇಂದಿನ ಒತ್ತಡದ ಜೀವನದಲ್ಲಿ ಓದುವುದಕ್ಕಾಗಿಯೇ ಸಮಯ ನಿಗದಿ ಮಾಡಲು ಸಾಧ್ಯವೇ. ಓದುವುದು ನಮ್ಮ ಹವ್ಯಾಸವಾಗಬೇಕೇ ವಿನಹಃ ಅದು ಕರ್ತವ್ಯವಾಗಬಾರದು. ಹಾಗಾಗಿ ಪುಸ್ತಕ ನಮ್ಮ ಬಳಿ ಇರಬೇಕು ಅಂದ ಮೇಲೆ ಅದು ಕೊಳಕಾಗದೆ (ಹಾಳಾಗದೆ)ಇರಲು ಸ...