Posts

ಹಕ್ಕಿ ಹಾರುತಿದೆ ನೋಡಿರೋ-----ನನ್ನ ಕವನ

ನನ್ನ ಕೆಲವು ಕವನಗಳಲ್ಲಿ ನನಗೆ ಹೆಚ್ಚಾಗಿ ಮೆಚ್ಚುಗೆಯಾದ ಕವನ ನಿಮಗೂ ಹಿಡಿಸಿದಲ್ಲಿ ಒಂದು ಸಣ್ಣ ಲೈಕ್ ಮಾಡಿ............ ............ಹಕ್ಕಿ ಹಾರುತಿದೆ ನೋಡಿರೋ............. -- ಹಕ್ಕಿ ಹಾರುತಿದೆ ನೋಡಿರೋ ಭ್ರಷ್ಠಾಚಾರಿಗಳ, ಅತ್ಯಾಚಾರಿಗಳ ಪುಂಡ, ಪೋಕರಿಗಳ ನೆತ್ತಿಮ್ಯಾಲೆ ಹಕ್ಕಿ ಹಾರುತಿದೆ ನೋಡಿರೋ                                 (ಪಲ್ಲವಿ)                    ವಿದೇಶಿ ಕಂಪನಿಗಳಿಗೆ ಭೂಮಿ ಕೊಟ್ಟಿ                    ಉಳುವಾಯೋಗಿಗೆ ಉರುಳು ಕೊಟ್ಟಿ                    ದನಕರುಗಳ ನೆತ್ತಿಮ್ಯಾಲೆ                    ಹಕ್ಕಿ ಹಾರುತಿದೆ ನೋಡಿರೋ ಕಪ್ಪುಹಣದಲ್ಲಿ ಮಂದ...

ಬಾಂಧವ್ಯದ ಬೆಸುಗೆ

ಬಾಂಧವ್ಯದ ಬೆಸುಗೆ ಭಾವನೆಗಳ ಬಾಂಧವ್ಯಕ್ಕೆ ದೀಪದ ಬೆಸುಗೆ ಕತ್ತಲು ಕಳೆದು ಬಂದೆ ನೀ ಹೊಸ ಬಾಳಿಗೆ ಯಾರೋ ಮನೆಯಂಗಳದಿ ಅರಳಿದ ಹೂ ಕರುಣೆಯ ಹೊಂಬೆಳಕು ಎಮ್ಮ ಮನೆಯಂಗಳದಿ ದೀಪವ ಹಚ್ಚಿ ಪಸರಿಸಿದಿ ನೀ ನಗೆಯ ಬೆಳಕು ದೀಪದಿಂದ ದೀಪವೋ ಬಾಂಧವ್ಯದ ಬೆಸುಗೆಯೋ ಭಾವನೆಗಳ ಬಾಂಧವ್ಯಕ್ಕೆ ದೀಪದ ಬೆಸುಗೆ ಕತ್ತಲು ಕಳೆದು ಬಂದೆ ನೀ ಹೊಸ ಬಾಳಿಗೆ                               --------- ಮೌನಯೋಗಿ

ಶಬ್ದಗಳ ಗೊಂದಲ, ಓದುಗ ವಿಲವಿಲ

ಪತ್ರಿಕಾರಂಗ ಈಗ ಕಳೆಕಳೆದುಕೊಳ್ಳುತ್ತಾ ಉದ್ಯಮವಾಗಿ ಪತ್ರಿಕೋಧ್ಯಮವಾದಂತೆಲ್ಲ ಅದರಲ್ಲಿ ಭಾಷೆಯ ಬಳಕೆ ಕೂಡ ಭಿನ್ನ ವಿಭಿನ್ನವಾಗುತ್ತಿದೆ. ಸಾಹಿತ್ಯೀಕ ಭಾಷೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಾ ಓದುಗನ ಅಭಿರುಚಿಗಿಂತ ತಮ್ಮ ತಮ್ಮ ಶೈಲಿಯಲ್ಲಿ ಭಾಷೆಯ ಪದ ಬಳಕೆ ಈಗ ಹೆಚ್ಚಾಗುತ್ತಿದೆ ಆದ್ದರಿಂದ ಈ ಭಾಷೆಯ ಶಬ್ದಗಳ ಗೊಂದಲದಿಂದ ಓದುಗ ವಿಲವಿಲ ಒದ್ದಾಡುತ್ತಿದ್ದಾನೆ ಎನ್ನುವದರಲ್ಲಿ ಎರಡು ಮಾತಿಲ್ಲ. ಪ್ರತಿಯೊಂದು ಪತ್ರಿಕೆ ಇಂದು ತನ್ನದೇ ಆದ ಭಾಷೆ ಶೈಲಿಯ ಪದ ಬಳಕೆಯನ್ನ ಹೊಂದಿದೆ. ಗಮನಿಸಬೇಕಾದುದು ಇಲ್ಲಿ ಶೈಲಿ ಯಾರದಾದರೇನು ಪತ್ರಿಕೆಗಳಿಗೆ ಓದುಗ ಮುಖ್ಯವಲ್ಲವೇ ಆದರೆ ಇಲ್ಲಿ ಶೈಲಿಯ ಪದಗಳ ವಿಭಿನ್ನತೆಯಿಂದ ಆ ಶಬ್ದಗಳ ಗೊಂದಲ ಓದುಗನನ್ನು ಕಾಡುತ್ತಿರುವುದಂತು ಸತ್ಯ. ನಮ್ಮ ಸಾಹಿತೀಕ ಪರಿಭಾಷೆಯಲ್ಲಿ ನಾವು ಒಂದೇ ಶಬ್ದಕ್ಕೆ ಹಲವು ಅರ್ಥಗಳನ್ನ ಬಳಸುವುದನ್ನು ನಾವು ಕಾಣುತ್ತೇವೆ. ಯಾಕೆಂದತೆ ಆ ಕೃತಿ ರಚಿಸಿದ ಸಾಹಿತಿ ಅವರು ಜೀವಿಸುತ್ತಿರುವಲ್ಲಿನ ಪರಿಸರದಲ್ಲಿ ಬಳಸುವ ಶಬ್ದಗಳ ಬಳಕೆಯಿಂದ ಸಾಹಿತ್ಯ ರಚಿಸುವುದು ಸೂಕ್ತವೆನ್ನುವುದು ನಮ್ಮ ಅನಿಸಿಕೆ. ಆದರೆ ಒಂದು ಪತ್ರಿಕೆ ಯಾವೊಂದು ಪರಿಸರ ಅಥವಾ ಪ್ರದೇಶಕ್ಕೆ ಸಿಮಿತವಾಗಿರಲ್ಲ ಅಖಂಡತೆಯನ್ನ ಪತ್ರಿಪಾಧಿಸುವ ಒಂದು ಸಂಚಾರ ಮಾಧ್ಯಮ ಇಲ್ಲಿ ಪತ್ರಿಕೆಗೆ ಒಂದು ಭಾಷೆ ಇರುತ್ತದೇಯೋ ಹೊರತು ಪ್ರದೇಶಕ್ಕೊಂದು ಭಾಷೆ ಇರಲ್ಲ. ಒಂದಂತು ಸತ್ಯ ಆ ಪತ್ರಿಕೆಗಳಲ್ಲಿ ಪ್ರಚುರಪಡಿಸುವ ಲೇಖನ...

ಶಾಲು...............

ಶಾಲು............... ಶಾಲು ಸನ್ಮಾನ ಬೇಡವೆನ್ನದರಿ ಓ ಸನ್ಮಾನಿತರೇ ಬದುಕು ಬೇಡವಾದಾಗ ಅಥವಾ ಸಾಲ ಹೆಚ್ಚಾದಾಗ ಆಧಾರಕ್ಕಿರಲಿ ಈ ಶಾಲು................... -------------------------------------------------ಮೌನಯೋಗಿ.............