- Get link
- X
- Other Apps
Posts
ರೊಟ್ಟಿ ತುಣುಕು
- Get link
- X
- Other Apps
ನನ್ನ 2ನೇ ಕತೆ ರೊಟ್ಟಿ ತುಣುಕು — ಮಹೇಶ ಕಲಾಲ ಯಾದಗಿರಿ ಸಂಜೆಯಾಗುತ್ತಿತ್ತು ಯಾಕೋ ಬೇಜಾರಾಗಿತ್ತು . ಇದ್ದಕ್ಕಿದ್ದಂತೆ ಏನೋ ಬೇಸರ . ಬೇಸರ ಕಳೆಯಲು ಸಂಜೆ ವಾಕಿಂಗ್ ಹೋದರಾಯ್ತು ಅಂತ ಎದ್ದೆ . ಅಡುಗೆ ಮನೆಯಲ್ಲಿ ನನ್ನ ಹೆಂಡತಿ ಪಾತ್ರೆ ತೊಳೆಯುತ್ತಿರುವ ಶಬ್ದ ಮತ್ತೇಕೆ ಅವಳಿಗೆ ಹೇಳೋದು ಮಾಮೂಲಿನಂತೆ ಹೋದರಾಯ್ತು ಅಂತ ಹೊರ ಕೊಣೆಗೆ ಬಂದೆ . ನನ್ನ ಇರುವಿಕೆಯ ಶಬ್ದವನ್ನು ಗ್ರಹಿಸಿದ ಅರ್ಧಾಂಗೀನಿ ರೀ ಕಾಫಿ ಮಾಡಲಾ ಅಂತ ಅಂದಳು . ಬೇಡ ಕಣೆ ಯಾಕೋ ಸುಸ್ತು , ಒಂಥರಾ ಬೇಜಾರು ಇಲ್ಲೇ ಹೊರಗಡೆ ಹೋಗಿ ಬರುತ್ತೇನೆ ಅಂದೆ . ಅದಕ್ಕವಳು ಯಾಕೆ ಏನಾಯ್ತು ಅಂತ ಹೊರಬಂದಳು . ನನ್ನ ಮುಖ ನೋಡಿ ಒಂದು ಕ್ಷಣ ಆಶ್ಚರ್ಯಗೊಂಡವಳಂತೆ ಯಾಕ್ರಿ ಮುಖ ಇಷ್ಟೊಂದು ಸುಕ್ಕುಗಟ್ಟಿ ಹಣೆ ಬಿರಿದುಕೊಂಡಿದೆ . ಏನು ಅಂಥ ಟೆನಷನ್ ಇದೆ . ಅಂತ ಕೇಳಿದಳು . ಏನಿಲ್ಲ ಯಾಕೋ ಒಂಥರಾ ಬೆಳಗ್ಗಿನಿಂದ ಬೇಜಾರು ಅದಕ್ಕೆ ಹೊರಗಡೆ ಹೋಗಿ ಬಂದರಾಯ್ತು ಅಂತ ಅಂದೆ . ಸರಿ ನಾನು ಬರುತ್ತೇನೆ ಅಂದಳು . ಹೇ ಬೇಡ ಕಣೆ ಇಲ್ಲೆ ಹೋಗಿಬರುತ್ತೇನೆ ನೀನು ಕೆಲಸ ಮಾಡು ಅಂದೆ . ಅದಕ್ಕವಳು ಅಂತ ಏನು ಕೆಲಸ ಇಲ್ಲ . ಬೆಳಗ್ಗೆ ಮಾಡಿದ ಅನ್ನ ಮತ್ತು ಹುಳಿ ಇದೆ . ಸಂಜೆಗೆ ಅದನ್ನೆ ಬಿಸಿ ಮಾಡಿದರಾಯ್ತು ಅಂದಳು . ಸರಿ ನಡಿ ಅಂತ ಅವಳನ್ನು ಕರೆದುಕೊಂಡು ರಸ್ತ...